ಶಾಲಾ ಆವರಣದಲ್ಲಿ ನಡೆಯುವ ಕಲಿಕಾ ಪೂರಕ ಚಟುವಟಿಕೆಗಳು ಶೈಕ್ಷಣಿಕವಾಗಿ ಬಹು ಮುಖ್ಯ ಪಾತ್ರವನ್ನು ಹೊಂದುತ್ತವೆ.. ಕೆ ಸಂಜೀವ ಪೂಜಾರಿ-ಕಹಳೆ ನ್ಯೂಸ್
ಬಂಟ್ವಾಳ : ಶಾಲಾ ಆವರಣದಲ್ಲಿ ನಡೆಯುವ ಕಲಿಕಾ ಪೂರಕ ಚಟುವಟಿಕೆಗಳು ಶೈಕ್ಷಣಿಕವಾಗಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಪರಿಸರದ ಕಾಳಜಿಯನ್ನು ವಹಿಸಿಕೊಂಡು ರೂಢಿಗೊಳಿಸಿದಾಗ ಮುಂದಿನ ದಿನಗಳಲ್ಲಿ ಪರಿಸರದ ಪ್ರಜ್ಞೆಯನ್ನು ಮೂಡಿಸುತ್ತದೆ ಆದುದರಿಂದ ಶಾಲೆಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳನ್ನು ಜಾಗೃತಗೊಳಿಸಬೇಕು.ಎಂದು 2024 ರ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ ಸಜೀಪ ಮೂಡ ಇದರ ಅಧ್ಯಕ್ಷರಾದ ಕೆ ಸಂಜೀವ ಪೂಜಾರಿ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ಇಲ್ಲಿ ಶಾಲಾ ಆವರಣದಲ್ಲಿ ಹಣ್ಣಿನ ಗಿಡವನ್ನು ನೆಟ್ಟು ಪರಿಸರ ಪ್ರಜ್ಞೆಯನ್ನು ಮೂಡಿಸಿ ತಾಂತ್ರಿಕತೆ ಮೂಲಕ ಶಿಕ್ಷಣವನ್ನು ಪಡೆಯಲು ಸಹಾಯವಾಗುವಂತೆ ಶಾಲೆಗೆ ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಪಿ ಡಬ್ಲ್ಯೂ ಡಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುರ್ಚಿಗುಡ್ಡೆ, ಜಯಶಂಕರ್ ಕಾನ್ಸ್ ಲೆ ನಿರ್ದೇಶಕರು ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ ಸಜೀಪ ಮೂಡ, ಕಿಶೋರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದ ಕ ಜಿಲ್ಲಾ ಮೂರ್ತೆದಾರರ ಮಹಾಮಂಡಳ ಸಹಕಾರಿ ಸಂಘ ನಿ ಬಿ ಸಿ ರೋಡ್,ಇಕ್ಬಾಲ್ ನಂದಾವರ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ವಂದಿಸಿದರು. ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.