Monday, January 27, 2025
ಮುಂಬೈಸಿನಿಮಾಸುದ್ದಿ

ಸಾಲು ಸಾಲು ವೆಬ್ ಸೀರಿಸ್‌, ಬೆಳ್ಳಿ ಪರದೆಯಲ್ಲೂ ಮೋಡಿ ಮಾಡುತ್ತಿದ್ದಾರೆ ಬಾಲಿವುಡ್‌ ಖ್ಯಾತ ನಟಿ, ಕಾಸ್ಟಿಂಗ್‌ ಡೈರೆಕ್ಟರ್‌ ಆರತಿ ಮಿತ್ತಲ್..!! – ಕಹಳೆ ನ್ಯೂಸ್

ಆರತಿ ಮಿತ್ತಲ್..! ಸೌಂದರ್ಯದ ಜೊತೆಗೆ ಅಪೂರ್ವ ಅಭಿನಯದ ಮೂಲಕ ಹೆಸರು ಮಾಡಿದ ಮುದ್ದು ಅರಗಿಣಿ. ಹರ್ಫೌಲ್ ಮೋಹಿನಿ, ಏಕ್ ಮಹಾನಾಯಕ್ ಡಾ ಭೀಮ ರಾವ್ ಅಂಬೇಡ್ಕರ್, ಕುಂಡಲೀ ಭಾಗ್ಯ, ರಕ್ಷಾಬಂಧನ್ ಹಿಂದಿ ಧಾರಾವಾಹಿಗಳನ್ನು ನೋಡಿದವರಿಗೆ ಇವರು ಚಿರಪರಿಚಿತರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೆಹಲಿ ಮೂಲದವರಾದ ಆರತಿ ಮಿತ್ತಲ್ ಹುಟ್ಟಿದ್ದು ದೆಹಲಿಯಲ್ಲಿ. ಮಾನವ್ ಭಾರತೀ ವಿಶ್ವವಿದ್ಯಾಲಯ ಸುಲ್ತಾನ್‌ ಪುರ ಇಲ್ಲಿ ಎಂಬಿಎ ಮಾರ್ಕೆಟಿಂಗ್ ಪದವಿ ಪೂರೈಸಿದರು. ಎಂಬಿಎ ಪದವಿ ಪೂರೈಸಿದರೂ, ಇವರನ್ನು ಕೈ ಬೀಸಿ ಕರೆದಿದ್ದು ಬಣ್ಣದ ಜಗತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದಿ ಕಿರುತೆರೆ ಲೋಕದಲ್ಲಿ ಸಾಕಷ್ಟು ಸೆನ್ಸೇಷನ್, ಅತ್ಯಧಿಕ ಟಿಆರ್‌ಪಿ/ಟಿವಿಆರ್‌ ಗಳಿಸಿ ದಾಖಲೆ ಬರೆದ ಪ್ರಮುಖ ಧಾರಾವಾಹಿಗಳಲ್ಲಿ ಆರತಿ ಮಿತ್ತಲ್ ಬಣ್ಣ ಹಚ್ಚಿದ್ದಾರೆ. ಕಲರ್ಸ್ ಟಿವಿ, ದಂಗಲ್ ಟಿವಿ, ಸ್ಟಾರ್ ಪ್ಲಸ್‌ ಹಿಂದಿ ಚಾನೆಲ್ ವೀಕ್ಷಕರಿಗೆ ಇವರ ಪರಿಚಯ ಇದ್ದೇ ಇರುತ್ತದೆ. ನವ ರಸಗಳನ್ನು ಮನೋಜ್ಞವಾಗಿ ಉಣಬಡಿಸುವ ಕಲಾವಿದೆಯ ಚಾಕಚಕ್ಯತೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ.

ಸಾಲು ಸಾಲು ಸೂಪರ್‍ ಹಿಟ್ ಧಾರಾವಾಹಿಗಳಲ್ಲಿ ನಟನೆ
ಕಲರ್ಸ್ ಟಿವಿಯ ಹರ್ಫೌಲ್ ಮೋಹಿನಿ, ಸ್ಟಾರ್ ಪ್ಲಸ್‌ನ ಶೋ ಬನ್ನಿ ಚೌ ಹೋಮ್ ಡೆಲಿವರಿಯಲ್ಲಿ ಪ್ರಣೀತಾಳ ಪಾತ್ರ, ಏಕ್ ಮಹಾನಾಯಕ್ ಡಾ ಭೀಮ ರಾವ್‌ ಅಂಬೇಡ್ಕರ್, ಕುಂಡಲಿ ಭಾಗ್ಯ, ದಂಗಲ್ ಟಿವಿಯಲ್ಲಿ ಪ್ರಸಾರ ಕಂಡ ರಕ್ಷಾಬಂಧನ್‌ನಲ್ಲಿ ಅಶರ್ಫಿ ಪಾತ್ರಗಳು ಇವರ ಕಲಾ ಬದುಕಿಗೆ ಭದ್ರ ಬುನಾದಿ ಹಾಕಿದವು.

ಆ ನಂತರ ‘ಅಪ್ನಾಪನ್: ಬದಲ್ತೆ ರಿಶ್ಟನ್ ಕಾ ಬಂಧನ್’ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ‘ನಾ ಒಮರ್ ಕಿ ಸೀಮಾ ಹೋ’ ಧಾರಾವಾಹಿಯಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ‘ಯೇ ಹೈ ಫ್ಯಾನ್’, ‘ಧರ್ಮಪತ್ನಿ’, ‘ಸನಕ್: ಏಕ್ ಜುನೂನ್’ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಬೆಳ್ಳಿ ಪರದೆಯಲ್ಲೂ ಮೋಡಿ ಮಾಡಿದ ಆರತಿ
ಧಾರಾವಾಹಿಗಳಲ್ಲಿ ಮಾತ್ರವಲ್ಲದೆ, ಆರತಿ ಮಿತ್ತಲ್ ಸಿನಿಮಾದಲ್ಲೂ ನಟಿಸಿದ್ದಾರೆ. ದಿವಂಗತ ನಟ ಸತೀಶ್ ಕೌಶಿಕ್ ಅವರ ‘ಕರ್ಮ ಯುದ್ಧ’ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. ಪಪ್ಪು ಎಂಬ ಸಿನೆಮಾದಲ್ಲೂ ಇವರು ನಟಿಸಿದ್ದಾರೆ. ಹಿಂದಿ ಚಿತ್ರವಾದ ಹೈ ಇಷ್ಕ್ ವಾಜದಲ್ಲಿ ದಿಶಾ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವುದು ವಿಶೇಷ.

ಸಾಲು ಸಾಲು ವೆಬ್ ಸೀರಿಸ್‌ಗಳಲ್ಲಿ ನಟನೆ
MX ಪ್ಲೇಯರ್ ಸರಣಿ ಜಿಎಸ್‌ಟಿ, ರೋಹಿತ್ ರಾಯ್ ಸ್ಟಾರ್ಟರ್ ಸನಕ್ ಏಕ್ ಜುನೂನ್, ರೂಹಾನಿಯತ್ ನಲ್ಲಿ ನಟಿಸಿದ್ದಾರೆ. ಖ್ಯಾತ ನಟ ವಿವೇಕ್ ಒಬೆರಾಯ್ ನಟನೆಯ ಧಾರವಿ ಬ್ಯಾಂಕ್‌ ವೆಬ್ ಸೀರಿಸ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆರತಿ, ಸತೀಶ್ ಕೌಶಿಕ್ ಅಭಿನಯದ ಹಾಟ್‌ಸ್ಟಾರ್ ಸರಣಿ, ಗಾನ್ ಗೇಮ್ 2 ಮತ್ತು ನಾಸಿರುದ್ದೀನ್ ನಟನೆಯ ತಾಜ್‌ ಎಂಬ ವೆಬ್‌ ಸೀರೀಸ್‌ನಲ್ಲೂ ನಟಿಸಿದ್ದಾರೆ.

ನಟನೆ ಮಾತ್ರವಲ್ಲದೆ ಮಾಡೆಲಿಂಗ್ ಕ್ಷೇತ್ರದಲ್ಲೂ ಸೈ ಎನಿಸಿಕೊಂಡವರು ಆರತಿ ಮಿತ್ತಲ್. ಡಿಸೈನರ್ ಭೂಮಿ ಅವರ ಹಲವು ಫ್ಯಾಶನ್ ಉಡುಗೆ ತೊಟ್ಟು ರ್‍ಯಾಂಪ್‌ ವಾಕ್ ಮಾಡಿದ್ದಾರೆ. ಇಷ್ಟಲ್ಲದೆ ಹಲವು ಮುದ್ರಣ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಇಷ್ಟಲ್ಲದೆ, ಹಲವು ವಿದೇಶಿ ಬ್ರಾಂಡ್‌ ಗಳ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾರೆ. ತಮ್ಮ ಅಪೂರ್ವ ಸಿಗ್ಧ ಸೌಂದರ್ಯದ ಮೂಲಕ ಎಲ್ಲರನ್ನೂ ಒಂದೇ ನೋಟದಲ್ಲಿ ಸೆಳೆವ ಇವರು ಈಗಾಗಲೇ ಹಲವು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆರತಿ ಅವರನ್ನು ದೊಡ್ಡ ಪರದೆಯಲ್ಲೂ ಕಾಣಬಹುದು. ಇವರ ಸಿನಿ ಜರ್ನಿಯಲ್ಲಿ ಇನ್ನಷ್ಟು ಏಳಿಗೆ ಆಗಲಿ. ಪ್ರೇಕ್ಷಕರನ್ನು ತಮ್ಮ ನಟನಾ ಕೌಶಲ್ಯದಿಂದ ಹಿಡಿದಿಟ್ಟುಕೊಳ್ಳಬಲ್ಲ ಚೆಲುವೆಯ ಬದುಕಿಗೆ ಆಲ್‌ ದಿ ಬೆಸ್ಟ್.