Monday, January 27, 2025
ಕೇರಳಸುದ್ದಿ

ಬಂದಾರು ಗ್ರಾಮ ಪೆರ್ಲ -ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಪುನರ್ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಕಾರಣಿಕರ್ತರಾದ ಸಮಸ್ತರಿಗೆ ಅಭಿನಂದನಾ ಸಭೆ-ಕಹಳೆ ನ್ಯೂಸ್

ಬಂದಾರು : ಜ 26 ಬಂದಾರು ಗ್ರಾಮ ಪೆರ್ಲ -ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಪುನರ್ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಕಾರಣಿಕರ್ತರಾದ ಸಮಸ್ತರಿಗೆ ಅಭಿನಂದನಾ ಸಭೆ ಸಿದ್ಧಿಶ್ರೀ ಕಲಾವೇದಿಕೆಯಲ್ಲಿ ಜ 26 ರಂದು ನಡೆಯಿತು.

ಬ್ರಹ್ಮಕಲಶೋತ್ಸವ ಯಶಸ್ಸಿಗೆ ಕಾರಣಿಭೂತರಾದ ವಿವಿಧ ಸಮಿತಿಗಳಿಗೆ ,ದಾನಿಗಳಿಗೆ, ಭಕ್ತವೃಂದಕ್ಕೆ ಅಭಿನಂದನೆ ಸಲ್ಲಿಸಿ ಯುವ ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿಯವರು ಶುಭ ನುಡಿ ಸಲ್ಲಿಸಿದರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಮಹಾಬಲ ಗೌಡ ಇವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಕೃಷಿ ವಿಭಾಗ ಮುಖ್ಯಸ್ಥರಾದ ಬಜೆಗುತ್ತು ಬಾಲಕೃಷ್ಣ.ಪೂಜಾರಿ ಯವರು ಅಭಿನಂದನಾ ಮಾತುಗಳನ್ನಾಡಿದರು, ಮುಖ್ಯ ಅತಿಥಿಗಳಾಗಿ ಉಜಿರೆ ಎಸ್.ಡಿ.ಯಮ್. ಕಾಲೇಜು ಉಪನ್ಯಾಸಕರಾದ ಡಾ. ದಿವಾ ಕೊಕ್ಕಡ ಇವರು ಸಂದರ್ಭಯೋಚಿತವಾಗಿ ಮಾತುಗಳನ್ನಾಡಿದರು,

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ವಿಭಾಗ ಯೋಜನಾಧಿಕಾರಿ ಸುರೇಂದ್ರ,ಅನುವAಶೀಯ ಆಡಳಿತ ಮೊಕ್ತೇಸರರಾದ ಕುಕ್ಕಪ್ಪ ಗೌಡ, ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಗೌಡ ಅಡ್ಡಾರು, ಕಾರ್ಯದರ್ಶಿ ಉಮೇಶ್ ಗೌಡ,ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾಜೆ, ಕೋಶಾಧಿಕಾರಿ ಕೇಶವ ಗೌಡ ಕೊಂಗುಜೆ, ದೇವಳದ ಅರ್ಚಕರಾದ ಅನಂತರಾಮ ಶಬರಾಯ, ಭಜನಾ ಮಂಡಳಿ ಅಧ್ಯಕ್ಷರಾದ ಲಕ್ಷ್ಮಣ ಗೌಡ ಫಲಸದಕೋಡಿ, ಮಹಿಳಾ ಸಮಿತಿ ಅಧ್ಯಕ್ಷರಾದ ಶ್ವೇತಾ ಹಾರ್ತ್ಯಾರು ವೇದಿಕೆಯಲ್ಲಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸತೀಶ್ ಬಾಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು. ದೇವಳಕ್ಕೆ ವಸ್ತು ರೂಪದಲ್ಲಿ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.ವಿವಿಧ ಸಮಿತಿ ಪದಾಧಿಕಾರಿಗಳು, ಭಕ್ತವೃoದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು