Monday, January 27, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರ ದಲ್ಲಿ ಹೊಸ ಕಾರ್ಯಾಗಾರ ಧರ್ಮ ಶಿಕ್ಷಣ -ಸ್ವಚ್ಛತೆ, ದೇಶ ಸಂರಕ್ಷಣಾ -ಕಹಳೆ ನ್ಯೂಸ್

ಹತ್ತೂರ ಒಡೆಯ ಪುತ್ತೂರ ಮುತ್ತು ಶ್ರೀ ಮಹಾಲಿಂಗೇಶ್ವರ ದೇವರ ಆಶ್ರಯದಲ್ಲಿ ಪ್ರಾರಂಭ ಗೊಂಡು ಇದೀಗ ದೇವಾಲಯ ಸಂವರ್ಧನೆ ಯಿಂದ ನಡೆಸಲ್ಪಡುವ ಅಟಲ್ ಉದ್ಯಾನ ಧಾರ್ಮಿಕ ಶಿಕ್ಷಣ ಕೇಂದ್ರ-3 ಇದರ ವತಿಯಿಂದ, ಜ.26ರಂದು, “ಸ್ವಚ್ಛತಾ ಅಭಿಯಾನ”ಕ್ಕೆ ಚಾಲನೆ ನೀಡಲಾಗಿದ್ದು, ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಎಂಬ ಸಂದೇಶವನ್ನು ಸಾರುವುದರೊಂದಿಗೆ, ಧರ್ಮದ ಶಿಕ್ಷಣ ದೊಂದಿಗೆ ದೇಶದ ಕೆಲಸ ಭಾರತ ದೇಶವನ್ನು ಸ್ವಚ್ಛ ವಾಗಿ ಹೇಗೆ ಇಟ್ಟುಕೊಳ್ಳಬೇಕು.ಎಂಬ ಮಾಹಿತಿ ನೀಡುವುದರೊಂದಿಗೆ, ಇನ್ನು ಮುಂದೆ ಪ್ರತಿ ತಿಂಗಳ ಯಾವುದಾದರೊಂದು ಆದಿತ್ಯವಾರದಂದು ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ನಿರಂತರ ಸ್ವಚ್ಛತಾ ಸೇವೆಯಲ್ಲಿ ನಮ್ಮ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಳ್ಳಲಿದ್ದಾರೆ. ಧಾರ್ಮಿಕ ಶಿಕ್ಷಣದೊಂದಿಗೆ, ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಅರಿವು ಮೂಡಿಸುತ್ತಾ, ಸ್ವಯಂಸೇವಕರ , ವಿದ್ಯಾರ್ಥಿ ಗಳಲ್ಲಿ ಸೇವಾ ಮನೋಭಾವವನ್ನು ಹೆಚ್ಚಿಸುವುದರೊಂದಿಗೆ, ದೇಶಾಭಿಮಾನವನ್ನು ಬೆಳೆಸುವುದೇ ನಮ್ಮ ಧ್ಯೇಯ ಎಂದು ಮನವರಿಕೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಮತಿ ವಿ.ಪ್ರಭಾವತಿ ಇವರ ನೇತೃತ್ವದಲ್ಲಿ ಪೋಷಕರಾದ ಪುಷ್ಪಾವತಿ ಜೈನ್ ಹಾಗೂ ತಂಡ ಇವರ ಸಹಕಾರದೊಂದಿಗೆ, ಕೊಂಬೆಟ್ಟು ವಾರ್ಡಿನ ನಗರಸಭಾ ಸದಸ್ಯರಾದ ಶ್ರೀಯುತ ಪಿ.ಜಿ. ಜಗನ್ನಿವಾಸ ರಾವ್ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನೆರವೇರಿತು.