Tuesday, January 28, 2025
ಉಡುಪಿಸುದ್ದಿ

ಉಡುಪಿ: ಅಲೆವೂರಿನ ಶಾಂತಲಾ ಇವೆಂಟ್ಸ್ ಗೋಡೌನ್ ನಲ್ಲಿ ಬೆಂಕಿ ಅವಘಡ-ಕಹಳೆ ನ್ಯೂಸ್

ಉಡುಪಿಯ ಹೊರ ವಲಯದಲ್ಲಿರುವ ಅಲೆವೂರಿನಲ್ಲಿ ಬೆಂಕಿ ಅವಘಡವಾಗಿದೆ. ಶಾಂತಲಾ ಇವೆಂಟ್ಸ್ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.

ರಮಾನಂದ ನಾಯಕ್ ಒಡೆತನದ ಶಾಂತಲಾ ಇವೆಂಟ್ಸ್ ಗೋಡಾನ್ ನಲ್ಲಿ ಬೆಳಗಿನ ಜಾವ 3.30ರ ವೇಳೆ ಬೆಂಕಿ ಆಕಸ್ಮಿಕದ ಘಟನೆ ನಡೆದಿದ್ದು, ಶಾಮಿಯಾನ ಮ್ಯಾಟ್ ಗಳನ್ನು ಶೇಖರಿಸಿಟ್ಟಿದ್ದ ಸ್ಥಳದಲ್ಲಿ ಆರಂಭದಲ್ಲಿ ಕಾಣಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೋಡನೋಡುತ್ತಿದ್ದಂತೆ ವಾಟರ್ ಟ್ಯಾಂಕ್ ಸೇರಿದಂತೆ ಎಲ್ಲಾ ಪರಿಕರಗಳಿಗೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಅಗ್ನಿಶಾಮಕಗಳ ಸ್ಥಳ ಆಗಮಿಸಿ, ಬೆಂಕಿ ನಂದಿಸುವ ಕೆಲಸ ಮಾಡಿದೆ. ಸುತ್ತಮುತ್ತಲ ಪ್ರದೇಶಗಳಿಗೆ ಬೆಂಕಿ ಆವರಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು. ಗೋಡಾನ್ ಗೆ ಯಾವುದೇ ವಿದ್ಯುತ್ ಸಂಪರ್ಕ ಇರಲಿಲ್ಲ ಇಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ಯಾರಾದರೂ ಬೆಂಕಿ ಹಚ್ಚಿರಬಹುದಾ ಎಂಬ ಸಂಶಯವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು