
ಪುತ್ತೂರು : ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಶ್ಲೀಲವಾಗಿ ಅವಹೇಳನಕಾರಿಯಾಗಿ ಮಾತನಾಡಿದ ಕರ್ನಾಟಕ ಕಾಂಗ್ರೆಸ್ ಸರಕಾರದ ಸಚಿವ ರೋಷನ್ ಬೇಗ್ ವಿರುದ್ಧ ನಿನ್ನೆ ತಾನೆ ಪುತ್ತೂರು ಠಾಣೆಯಲ್ಲಿ ಅರಣ್ ಕುಮಾರ್ ಪುತ್ತಿಲ ಕಂಪ್ಲೇಂಟ್ ನೀಡಿದ್ದರು. ಇಂದು ಭಾರತೀಯ ಜನತಾ ಪಾರ್ಟಿ ಪುತ್ತೂರು ವತಿಯಿಂದ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಚನಿಲ ತಿಮ್ಮಪ್ಪ ಶೆಟ್ಟಿ , ಜೀವಂಧರ್ ಜೈನ್, ಗೋಪಾಲಕೃಷ್ಣ ಹೇರಳೆ, ವಿದ್ಯಾ ಆರ್ ಗೌರಿ, ಅನೀಶ್ ಬಡೆಕ್ಕಿಲ, ಸುಂದರ ಪೂಜಾರಿ ಬಡವು, ಕೇಶವ ಗೌಡ ಬಜತ್ತೂರು ಮತ್ತಿತರರು ಉಪಸ್ಥಿತರಿದ್ದರು.