ಮಂಗಳೂರು: ಫೆಬ್ರವರಿ 1 ಮತ್ತು 2ರಂದು ಐಕಳ ಬಾವ ಕಾಂತಾಬಾರೆ ಬೂದಾಬಾರೆ ಕಂಬಳನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಬೆಳವು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಕಳ ಕಂಬಳ ಶಿಸ್ತುಬದ್ಧವಾಗಿ ನಡೆಯಲಿದೆ.
ಕೋಣಗಳನ್ನು ಓಡಿಸುವವರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅನಗತ್ಯ ಕೋಣಗಳನ್ನು ಬಿಡಿಸುವಲ್ಲಿ ವಿಳಂಬವಾದರೆ ಕಾಯಲು ಸಾಧ್ಯವಿಲ್ಲ. ಸಮಯಕ್ಕೆ ಬಾರದ ಕೋಣಗಳ ಯಜಮಾನರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹಾಗೂ ಸಮಯ ಪಾಲನೆಯನ್ನು ಸರಿಯಾದ ರೀತಿಯಲ್ಲಿ ಪಾಲಿಸುವುದರ ಜೊತೆಗೆ ಸರಕಾರ ಕೊಟ್ಟ ಸೂಚನೆಯಂತೆ ನಡೆಸಲಾಗುವುದು ಎಂದರು.
49ನೇ ವರ್ಷದ ಈ ಕಂಬಳಕ್ಕೆ ಇನ್ನಷ್ಟು ಮೆರುಗು ಸಿಗಬೇಕು. ಇದು ನಮ್ಮ ರೈತಾಪಿ ವರ್ಗದ ಕ್ರೀಡೆಯಾಗಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾದ ಪ್ರಶಂಸೆ ದೊರೆತಿದ್ದು, ಲಕ್ಷಾಂತರ ಜನ ಮಾಧ್ಯಮದ ಮೂಲಕ ವೀಕ್ಷಣೆ ಮಾಡುತ್ತಿದ್ದಾರೆ ಎಂದರು.
ಮುAದಿನ ವರ್ಷ ಸುವರ್ಣ ಮಹೋತ್ಸವ ಇರುವುದರಿಂದ ?55 ಲಕ್ಷ ವೆಚ್ಚದ ವೇದಿಕೆಯನ್ನು ಸಾರ್ವಜನಿಕರ ಉಪಕಾರಕ್ಕಾಗಿ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಇದರ ಜೊತೆಗೆ ಐಕಳ ಬಾವದ ದೈವಸ್ಥಾನ ಹಾಗೂ ನಾಗ ಸ್ಥಾನ ಮತ್ತು ಕಾಂತಾಬಾರೆ ಬೂದಾಬಾರೆ ದೈವಸ್ಥಾನವನ್ನು ಜೀರ್ಣೋದ್ಧಾರವನ್ನು 50ನೇವರ್ಷದ ಕಾರ್ಯಕ್ರಮದಲ್ಲಿ ಮಾಡಲಿದ್ದೇವೆ ಎಂದರು.