Friday, September 20, 2024
ಸುದ್ದಿ

ಕರ್ನಾಟಕ ಇತಿಹಾಸದಲ್ಲಿ ಪ್ರಥಮವಾಗಿ ಮಂಗಳೂರಿನಲ್ಲಿ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ – ಕಹಳೆ ನ್ಯೂಸ್

ಮಂಗಳೂರು: ಮಂಗಳಮುಖಿಯರು ಅಂದಕೂಡಲೇ ಕೆಲವರಲ್ಲಿ ತಾತ್ಸಾರದ ಮನೋಭಾವನೆ ಮೂಡುತ್ತದೆ. ಇವ್ರನ್ನ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಮಾತಿಗೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಅದೇನೇ ಇರಲಿ, ಇಲ್ಲೊಂದು ನಗರದಲ್ಲಿ ಮಂಗಳಮುಖಿಯರು ಸೌಂದರ್ಯ ಸ್ಪರ್ಧೆಯಲ್ಲಿ ಆಸಕ್ತಿ ತೋರಿಸಿ ಮನಸೂರೆಗೊಂಡಿದ್ದಾರೆ.

ಹೆಣ್ಮಕ್ಕಳನ್ನೇ ನಾಚಿಸುವ ಸೌಂದರ್ಯದ ನಡಿಗೆ. ನಗುವಿನಲ್ಲೇ ಮೋಡಿ ಮಾಡುವ ಲಲನೆಯರು. ಇದು‌ ಮಂಗಳೂರಲ್ಲಿ ಕಂಡು ಬಂದ ದೃಶ್ಯ. ಹೌದು. ಮಂಗಳಮುಖಿಯರು ಎಂಬ ಪದ ಕೇಳಿದಾಗ ಕೆಲವರಲ್ಲಿ ಅದೇನೋ ತಾತ್ಸಾರದ ಭಾವನೆ. ಇವ್ರನ್ನ ಸಮಾಜದ ಮುಖ್ಯವಾಹಿನಿಗೆ ತರುವಂತಹ ಮಾತುಗಳು ಕೇಳಿ ಬರುತ್ತಿದ್ರೂ ಇನ್ನೂ ಪ್ರಾಯೋಗಿಕ ಹಂತಕ್ಕೆ ಬಂದಿಲ್ಲ. ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಮಂಗಳೂರಿನಲ್ಲಿರೋ ಮಂಗಳಮುಖಿಯರು ತಾವೇ ಸ್ವತಃ ಮುಖ್ಯವಾಹಿನಿಗಳಲ್ಲಿ ಗುರುತಿಸಲು ಮುಂದೆ ಬಂದಿದ್ದಾರೆ. ‌

ಜಾಹೀರಾತು
ಜಾಹೀರಾತು
ಜಾಹೀರಾತು

ಅದ್ರ ಮೊದಲ ಹಂತವೇ ಸೌಂದರ್ಯ ಸ್ಪರ್ಧೆ. ಮಂಗಳೂರಿನಲ್ಲಿ ವಾಸಿಸುತ್ತಿರೋ ಮಂಗಳಮುಖಿಯರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತಿ ತೋರಿದ್ದಾರೆ. ದೇಶದಲ್ಲೇ ದ್ವಿತೀಯ ಹಾಗೂ ಕರ್ನಾಟಕ ಇತಿಹಾಸದಲ್ಲಿ ಪ್ರಥಮವಾಗಿ ಮಂಗಳೂರಿನ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳಮುಖಿಯರು ಸ್ಪರ್ಧಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು.

ಜಾಹೀರಾತು

ಮಂಗಳೂರಲ್ಲಿ ನಡೆದ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ವಿವಿಧ ಜಿಲ್ಲೆಗಳಿಂದ 40 ಮಂದಿ ನೋಂದಾವಣೆ ಮಾಡಿಕೊಂಡಿದ್ರು. ಕೊನೆಗೆ 11 ಮಂದಿ ಸ್ಪರ್ಧಾಳುಗಳನ್ನ ಆಯ್ಕೆ ಮಾಡಲಾಗಿತ್ತು. ಫ್ಯಾಶನ್ ಶೋಗಳಂತಹ ಕಲರ್ ಫುಲ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಮಂಗಳಮುಖಿಯರು ಉತ್ಸಾಹ ತೋರುತ್ತಿದ್ದಾರೆ.

ಮುಂದೆ ಇಂತಹ ಅತ್ಯುತ್ತಮವಾದ ಒಂದು ಕೆಲಸಕ್ಕೆ ಸಮಾಜ ಹಾಗೂ ನಾಯಕರುಗಳು ಪ್ರೋತ್ಸಾಹ ನೀಡಿದಾಗ ಮಾತ್ರ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂಬುದು ಮಂಗಳಮುಖಿ ರೂಪದರ್ಶಿಯರ ಮಾತು. ‌ಮುಂದೆ ಹೀಗೆ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ನಾವು ನಮ್ಮ ಪ್ರತಿಭೆಯನ್ನ, ಇರುವಿಕೆಯನ್ನು ತೋರಿಸುತ್ತಲೇ ಇರುತ್ತೇವೆ ಅಂತಾರೆ ಮಂಗಳಮುಖಿ ರೂಪದರ್ಶಿಯರು.