Friday, January 31, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಕಸ ಹೆಕ್ಕುವುದಷ್ಟೇ ಅಲ್ಲ , ಎಸೆದವರಿಗೆ ದಂಡ -ಕಹಳೆ ನ್ಯೂಸ್

ಪುತ್ತೂರು: ಸ್ವಚ್ಛ ಸಂಸ್ಕೃತಿ ನಮ್ಮ ಸಂಸ್ಕೃತಿ ಅಭಿಯಾನಕ್ಕೆ ಪುತ್ತೂರು ತಾಲೂಕಿನಲ್ಲಿ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಅಭಿಯಾನದ ಕೊನೆಯ ಹಂತಕ್ಕೆ ತಲುಪುವ ಹೊತ್ತಿಗೆ ಇದು ಕೇವಲ ಕಸ ಹೆಕ್ಕುವುದಕಷ್ಟೇ ಸೀಮಿತ ಆಗಿಲ್ಲ. ಕಸ ಎಸೆದವರಿಗೆ ದಂಡ ಪ್ರಯೋಗವೂ ಆಗುತ್ತಿರುವುದು ವಿಶೇಷ..!

ಜ.21ರಂದು ಆರಂಭಗೊAಡ ಸ್ವಚ್ಛತ ಆಂದೋಲನ ಇಂದು ಮುಕ್ತಾಯ ಕಾಣಲಿದ್ದು ನಗರ ಗ್ರಾಮಗಳಲ್ಲಿ ಭಾರೀ ಪ್ರಮಾಣದ ಕಸ ತೆರವಾಗುವ ಜತೆಗೆ ದಂಡಾಸ್ತ್ರವೂ ಪ್ರಯೋಗವಾಗಿದೆ. ಈ ಮೂಲಕ ಕಸ ಎಸೆಯುವುದೇ ಅಪರಾಧ ಎನ್ನುವ ಎಚ್ಚರಿಕೆಯ ಸಂದೇಶವನ್ನು ರವಾನಿಸುವ ಪ್ರಯತ್ನವೂ ಇಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಲೂಕಿನ ನಾನಾ ಭಾಗಗಳಲ್ಲಿ ದಿನಂಪ್ರತಿ 3 ರಿಂದ 4 ತಾಸು ತನಕ ಸ್ವಚ್ಛತ ಕಾರ್ಯ ನಡೆಯುತ್ತಿದೆ. 22 ಗ್ರಾ.ಪಂ. ವ್ಯಾಪ್ತಿಯಲ್ಲಿ 2000 ಕ್ಕೂ ಅಧಿಕ ಮಂದಿ, ನಗರಸಭಾ ವ್ಯಾಪ್ತಿಯ 31 ವಾರ್ಡ್ಗಳಲ್ಲಿ 150 ಕ್ಕೂ ಅಧಿಕ ಮಂದಿ ಇದಕ್ಕಾಗಿ ಸಮಯ ಮೀಸಲಿಟ್ಟಿದ್ದಾರೆ. ಆರಂಭದಲ್ಲಿ ಕಸ ಹೆಕ್ಕುವ ಜತೆಗೆ ಕಸ ಹಾಕದಂತೆ ಜಾಗೃತಿ ಮೂಡಿಸುತ್ತಿದ್ದ ಈ ಅಭಿಯಾನದಲ್ಲಿ ಈಗ ದಂಡ ಅಸ್ತ್ರವೂ ಪ್ರಯೋಗಿಸಲಾಗುತ್ತಿದೆ. ಉದಾಹರಣೆಗೆ ಕೆಯ್ಯೂರು ಗ್ರಾ.ಪಂ. ವ್ಯಾಪ್ತಿಯ ಬೊಳಿಕ್ಕಳ ಶಾಲಾ ಬಳಿ ಗುರುವಾರ ಕಸ ಹೆಕ್ಕುವ ಅಭಿಯಾನ ನಡೆಯುತ್ತಿದ್ದ ವೇಳೆ ರಾಶಿ ರಾಶಿ ತ್ಯಾಜ್ಯ ಕಂಡು ಬಂದಿದೆ. ಇದರ ಮೂಲ ಪತ್ತೆ ಮಾಡಿದಾಗ ಎಸೆದವರ ಮಾಹಿತಿ ಸಿಕ್ಕಿತ್ತು. ಅವರಿಗೆ ಗ್ರಾ.ಪಂ. ವತಿಯಿಂದ ದಂಡ ವಿಧಿಸುವ ಮೂಲಕ ಉಳಿದೆಡೆ ಎಚ್ಚರಿಕೆ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಸ್ತುವಾರಿ ಯಾರು?
ಪುತ್ತೂರು ತಾ.ಪಂ. ನೇತೃತ್ವದಲ್ಲಿ ಈ ಅಭಿಯಾನ ನಡೆಯುತ್ತಿದೆ. ಪುತ್ತೂರು ನಗರಸಭೆ, ಸ್ವಚ್ಛ ಭಾರತ್ ಮಿಷನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದಲ್ಲಿ ಎಲ್ಲ ಇಲಾಖೆಗಳ ಸಹಕಾರ ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ವತ್ಛ ಪುತ್ತೂರು ಪರಿಕಲ್ಪನೆಯಡಿ ಈ ಕಾರ್ಯಕ್ರಮ ನಡೆಯುತ್ತಿದೆ. ತಾಲೂಕಿನ ನಾನಾ ಭಾಗಗಳಲ್ಲಿ ವಿದ್ಯಾರ್ಥಿಗಳು, ಸಂಜೀವಿನಿ ಒಕ್ಕೂಟಗಳ ಸದಸ್ಯೆಯರು, ಸ್ಥಳೀಯ ಸಂಘಟನೆಗಳಯ, ಎಸ್ ಕೆಡಿಆರ್‌ಡಿಪಿ, ನವೋದಯ ಗ್ರಾಮ ವಿಕಾಸ ಸಂಸ್ಥೆ, ಒಡಿಯೂರು ಗ್ರಾಮವಿಕಾಸ ಸಂಸ್ಥೆ ಮೊದಲಾದ ಸಂಸ್ಥೆಗಳು ಅಭಿಯಾನದ ಯಶಸ್ಸಿಗೆ ಕೈ ಜೋಡಿಸಿವೆ.

ಮನೆ ಮನೆ ಕಸ ಸಂಗ್ರಹ
ಒAದೆಡೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹೆಕ್ಕುವ ಅಭಿಯಾನ ನಡೆಯುತ್ತಿದ್ದರೆ ಸಂಜೀವಿನಿ ಒಕ್ಕೂಟದ ಸದಸ್ಯರು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾರೆ. ಇದರ ಜತೆಗೆ ಗ್ರಾ.ಪಂ.ವತಿಯಿAದ ನೀಡಲಾಗುತ್ತಿರುವ ಕಸ ಸಂಗ್ರಹ ಕೈ ಚೀಲಗಳನ್ನು ಮನೆ
ಮನೆಗೆ ವಿತರಿಸಲಾಗುತ್ತಿದೆ. ತಾಲೂಕಿನ ಎಲ್ಲ ಭಾಗಗಳಿಂದ ಸಂಗ್ರಹಗೊAಡ ಕಸವನ್ನು ಕೆದಂಬಾಡಿ ಗ್ರಾಮದ ಬೋಲೋಡಿಯಲ್ಲಿರುವ ಎಂಆರ್‌ಎಫ್ ಘಟಕಕ್ಕೆ ಒಯ್ಯಲಾಗುತ್ತಿದೆ. ಅಲ್ಲಿ ಕಸ ವಿಭಜಿಸಿ ಮರು ಬಳಕೆಗೆ ಪೂರಕವಾಗಿ ಜೋಡಿಸುವ ಕಾರ್ಯ ನಡೆಯುತ್ತಿದೆ. ಸಂಗ್ರಹಗೊAಡ ಕಸದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣವೇ ಅತಿ ಹೆಚ್ಚು ಇದೆ.

ಪತ್ತೆ ಹಚ್ಚಿ ದಂಡ
ಸ್ವಚ್ಛ ಸಂಸ್ಕೃತಿ ನಮ್ಮ ಸಂಸ್ಕೃತಿ ಅಭಿಯಾನಕ್ಕೆ ಅತ್ಯುತ್ತಮ ಬೆಂಬಲ ಸಿಕ್ಕಿದೆ. ಬರೀ ಕಸ ಹೆಕ್ಕುವುದಷ್ಟೇ ಆಗಿಲ್ಲ. ಕೆಲವೆಡೆ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ.