Sunday, January 19, 2025
ಸುದ್ದಿ

ಮೀ ಟೂ ಅಂದಿದ್ದ ಸಂಜನಾ ಈಗ ಫುಲ್ ಉಲ್ಟಾ – ಕಹಳೆ ನ್ಯೂಸ್

ಕನ್ನಡ ಚಿತ್ರರಂಗದಲ್ಲಿ ಈಗ ಮೀ ಟೂ ಅಭಿಯಾನದ್ದೇ ಸೌಂಡ್. ಮೊದಲಿಗೆ ನಟಿ ಸಂಗೀತಾ ಭಟ್ ಚಿತ್ರರಂಗದಲ್ಲಿ ತಮಗಾದ ಕಿರುಕುಳದ ಕುರಿತು ಹೇಳಿಕೆ ನೀಡಿದ ಬಳಿಕ ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ್ದ ನಟಿ ಸಂಜನಾ, ತಮಗೂ ‘ಮೀ ಟೂ’ ಅನುಭವವಾಗಿದ್ದು, ‘ಗಂಡ-ಹೆಂಡತಿ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕ ರವಿ ಶ್ರೀವತ್ಸ ಕಿರುಕುಳ ನೀಡಿದ್ದರೆಂದು ಆರೋಪಿಸಿದ್ದರು.

ಇದು ಸಂಜನಾ ಹಾಗೂ ರವಿ ಶ್ರೀವತ್ಸ ಅವರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತಲ್ಲದೇ ಸುದ್ದಿ ವಾಹಿನಿಯ ಲೈವ್ ಕಾರ್ಯಕ್ರಮದಲ್ಲಿ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದ್ರೆ ಇದೀಗ ಸಂಜನಾ ತಮ್ಮ ಆರೋಪದ ಕುರಿತು ನಿರ್ದೇಶಕ ರವಿ ಶ್ರೀವತ್ಸ ಅವರ ಕ್ಷಮೆ ಕೇಳಿದ್ದು, ಪ್ರಕರಣವನ್ನು ಮುಕ್ತಾಯಗೊಳಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜನಾ ಕ್ಷಮೆ ಕೇಳುತ್ತಿದ್ದಂತೆ ರವಿ ಶ್ರೀವಾತ್ಸವ್ ಪ್ರತಿಕ್ರಿಯೆ ನೀಡಿದ್ದಾರೆ. ಸಂಜನಾ “ಕ್ಷಮೆ ಕೇಳಿದ್ದಾರೆ,ನಾನು ಗೆದ್ದಿದ್ದೇನೆ” ಅಂತ ಹೇಳಿ ತಮ್ಮ ಖುಷಿಯನ್ನ ವ್ಯಕ್ತಪಡಿಸಿದ್ದಾರೆ.