ಮೆಲ್ಕಾರ್ ನ ತರಕಾರಿ ಅಂಗಡಿಯಲ್ಲಿ ಕಳವು, ಶಾಲೆಗಿಟ್ಟಿದ್ದ ಕಾಣಿಕೆ ಹುಂಡಿ ಕಳ್ಳರ ಪಾಲು-ಕಹಳೆ ನ್ಯೂಸ್
ಬಂಟ್ವಾಳ: ಮೆಲ್ಕಾರ್ ನ ತರಕಾರಿ ಅಂಗಡಿಗೆ ಕಳ್ಳರು ನುಗ್ಗಿ ನಗದು ದೋಚಿದ ಘಟನೆ ಬೆಳಕಿಗೆ ಬಂದಿದೆ. ಮಹಮ್ಮದ್ ಶರೀಫ್ ಎಂಬವರ ಮಾಲಕತ್ವದ ಚಂದ್ರಿಕಾ ತರಕಾರಿ ಅಂಗಡಿಯ ಬೀಗ ಮುರಿದು ಹಣಕ್ಕಾಗಿ ಜಾಲಾಡಿದ್ದಾರೆ. ಶರೀಫ್ ಅವರು ಸಾಮಾಜಿಕ ಸೇವಾ ಕರ್ತರಾಗಿದ್ದು ಸರಕಾರಿ ಶಾಲೆಯ ಅಭಿವೃದ್ದಿಗಾಗಿ ತನ್ನ ಅಂಗಡಿಯಲ್ಲಿ ಇಟ್ಟಿದ್ದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳರು ದೋಚಿದ್ದಾರೆ. ಕಾಣಿಕೆ ಡಬ್ಬಿ ತುಂಬಿದ್ದು ಅಂದಾಜು 5 ಸಾವಿರಕ್ಕಿಂತಲೂ ಅಧಿಕ ಮೊತ್ತದ ಹಣ ಅದರಲ್ಲಿತ್ತು ಎನ್ನಲಾಗಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ.