Saturday, February 1, 2025
ಬೆಂಗಳೂರುರಾಜಕೀಯರಾಜ್ಯಸುದ್ದಿ

ಮತ್ತೆ ಕೈ ಹಿಡಿಯುತ್ತಾರ ಡಾ. ಕೆ ಸುಧಾಕರ್..?- ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ಬಿಜೆಪಿ ಪಾಳಯದಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡ ಬೆನ್ನಲ್ಲೇ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಳಿಕ ಒಬ್ಬರಾದ ಮೆಲೆ ಒಬ್ಬರು ಬಹಿರಂಗವಾಗಿಯೇ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬಿ ವೈ ವಿಜಯೇಂದ್ರ ಅವರ ವಿರುದ್ಧ ಸಿಡಿದೆದ್ದ ಶ್ರೀರಾಮುಲು ಪಕ್ಷ ಬಿಡುಗ ಕುರಿತು ಮಾತನಾಡಿದ್ದು, ಬಿಜೆಪಿ ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿತ್ತು.

ಇದೀಗ ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದಿದ್ದ ಡಾ. ಕೆ ಸುಧಾಕರ್ ಅವರು ಮತ್ತೆ ಕೈ ಹಿಡಿಯುತ್ತಾರೆ ಎನ್ನುವ ಗುಸು ಗುಸು ಕೇಳಿ ಬರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ರಾಜ್ಯ ಬಿಜೆಪಿ ಸದ್ಯ ಮನೆಯೊಂದು ಮೂರು ಬಾಗಿಲಾಗಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರ ವಿರುದ್ದ ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಶ್ರೀರಾಮುಲು ಬಹಿರಂಗವಾಗಿ ಅಸಮಾಧಾನವನ್ನ ವ್ಯಕ್ತಪಡಿಸಿದ್ದು, ಇದೀಗ ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಸಂಸದರಾದ ಡಾ. ಕೆ ಸುಧಾಕರ್ ಅವರು ಬಹಿರಂಗವಾಗಿ ವಿಜಯೇಂದ್ರ ಅವರ ವಿರುದ್ದ ಸಿಡಿದೆದ್ದಿದ್ದಾರೆ. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಮೇಲಿನ ಸಿಟ್ಟಿಗೆ ಮತ್ತೆ ಕಾಂಗ್ರೆಸ್ ಹೋಗ್ತಾರಾ ಎನ್ನುವ ಕುತೂಹಲ ಹುಟ್ಟಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ಭವಿಷ್ಯವನ್ನ ಮಟುಕು ಮಾಡುವ ರೀತಿಯ ನಿರ್ಧಾರವನ್ನ ತೆಗೆದುಕೊಳ್ಳುತ್ತಿದ್ದಾರೆ. ಪಕ್ಷವನ್ನ ಅವನತಿಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಬೇರೆ ಮಾರ್ಗ ಕಾಣಲಿಲ್ಲ. ಇನ್ನೂ ಕೂಡ ಕೊಲೆಯ ಪ್ರಯತ್ನವಾಗಿ ದೆಹಲಿಗೆ ಹೋಗಿ ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡಿ. ಇಲ್ಲಿನ ಪರಿಸ್ಥಿತಿಯನ್ನ ಹೇಳುತ್ತೇನೆ. ಅಂತಿಮವಾಗಿ ನನ್ನ ಮುಂದಿನ ರಾಜಕೀಯ ನಡೆಯನ್ನ ತಿಳಿಸುತ್ತೇನೆ ಎಂದು ಸಂಸದ ಸುಧಾಕರ್ ಅವರು ಹೇಳಿರುವುದು ಹಲವು ಅನುಮಾನಗಳು ಹುಟ್ಟುವಂತೆ ಮಾಡಿದೆ.

2019ರ ಸಂದರ್ಭದಲ್ಲಿ ಮಾಧ್ಯಮದ ಮುಂದೆ ಬಂದು ನಾನು ಹೇಳಿದ್ದೆ. ಅವತ್ತು ಸಹ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ನನಗೆ ಪದವಿಗಳು ಮುಖ್ಯವಲ್ಲ. ಆದರೆ, ಸ್ವಾಭಿಮಾನ ಮುಖ್ಯ. ನನ್ನ ನಂಬಿದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನ ನಾನು ಮಾಡುತ್ತೇನೆ. ಆ ಸಭೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಏನು ಹೇಳ್ತಾರೋ ಅದೇ ರೀತಿ ನಾನು ನಡೆದುಕೊಳ್ಳುತ್ತೇನೆ ಎಂದು ಸುಧಾಕರ್ ಹೇಳುವ ಮೂಲಕ ಪಕ್ಷ ಬಿಡುವ ಸುಳಿವನ್ನ ನೀಡಿದ್ದಾರೆ ಎನ್ನಲಾಗಿದೆ.

ಇನ್ನೂ ಕಾರ್ಯಕರ್ತರು ಹಾಗೂ ಮುಖಂಡರ ಸಭೆಗೂ ಮುಂಚೆ ನಾನು ದೆಹಲಿಯ ರಾಷ್ಟ್ರೀಯ ನಾಯಕ ಜೊತೆಗೆ ಮಾತನಾಡಿದ ನಂತರ ಕಾರ್ಯಕರ್ತರು ಹಾಗೂ ಮುಖಂಡರ ಜೊತೆಗೆ ಸಭೆ ನಡೆಸುತ್ತೇನೆ ಎಂದು ಚಿಕ್ಕಬಳ್ಳಾಪುರ ಸಂಸದ ಡಾ. ಕೆ ಸುಧಾಕರ್ ಹೇಳಿದ್ದಾರೆ. ವಿಜಯೇಂದ್ರ ಅವರು ಚಿಕ್ಕ ವಯಸ್ಸು, ಅವರಿಗೆ ಅನುಭವದ ಕೊರತೆ ಇದೆ. ಒಂದು ವರ್ಷ ಅವಕಾಶ ಕೊಟ್ವಿ, ಆದರೆ, ಯಾವುದೇ ಪಾಸಿಟಿವ್ ಬೆಳವಣಿಗೆಗಳು ಆಗಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ರಾಜಕಾರಣದಲ್ಲಿ ಏನಾದ್ರೂ ಬೇಕಾದ್ರೂ ಆಗಬಹುದು ಎಂದು ಸುಧಾಕರ್ ಸುಳಿವು ನೀಡಿದ್ದಾರೆ.