Sunday, February 2, 2025
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳ

ನಾನು ಶಾಸಕನಾಗಬೇಕೆಂದು ಹೆಚ್ಚು ಆಸೆಪಟ್ಟವರು ಪುತ್ತೂರಿನ ಬಿಜೆಪಿ ಅಧ್ಯಕ್ಷರು: ಶಾಸಕ ಅಶೋಕ್ ರೈ-ಕಹಳೆ ನ್ಯೂಸ್

ವಿಟ್ಲ: ನಾನು ಶಾಸಕನಾಗಬೇಕೆಂದು ಅತೀ ಹೆಚ್ಚು ಆಸೆಪಟ್ಟವರಲ್ಲಿ ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು ಕೂಡಾ ಒಬ್ಬರಾಗಿದ್ದರು, ಅವರ ಆಸೆಯನ್ನು ದೇವರು ಸ್ವೀಕರಿಸಿದ್ದಾನೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಚಂದಳಿಕೆ ಯುವ ಕೇಸರಿ ಸಂಘಟನೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದಯಾನಂದರು ಮತ್ತು ನಾನು 20  ವರ್ಷದ ಗೆಳೆತನ. ನಾನು ಬಿಜೆಪಿಯಲ್ಲಿರುವಾಗ ನನ್ನಲ್ಲಿ ಅತೀವ ಪ್ರೀತಿಯನ್ನು ಹೊಂದಿದ್ದರು. ನನ್ನ ಕಚೇರಿಗೆ ಆಗಾಗ ಭೇಟಿ ನೀಡಿ ನನಗೆ ಸಲಹೆ ಕೊಡುವ ಕೆಲಸವನ್ನು ಮಾಡುತ್ತಿದ್ದರು. ಏನಾದರೂ ಸರಿ ಅಶೋಕಣ್ಣ ನೀವು ಪುತ್ತೂರಿನ ಶಾಸಕರಾಗಲೇಬೇಕು ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ ಅವರ ಪಕ್ಷದವರು ನನಗೆ ಅವಕಾಶ ಕೊಡಲಿಲ್ಲ. ಕಾಂಗ್ರೆಸ್ ನನಗೆ ಅವಕಾಶ ನೀಡಿದ್ದರಿಂದ ನಾನು ಇಂದು ಶಾಸಕನಾಗಿದ್ದೇನೆ. ದಯಾನಂದ ಉಜಿರೆಮಾರು ಅವರು ನನಗೆ ವೋಟು ಹಾಕಿರಬಹುದು ಎಂಬ ನಂಬಿಕೆಯೂ ಇದೆ ಎಂದು ಶಾಸಕರು ಹೇಳಿದರು. ಶಾಸಕರು ಮಾತನಾಡುವಾಗ ವೇದಿಕೆಯಲ್ಲಿದ್ದ ಬಿಜೆಪಿ ಅಧ್ಯಕ್ಷರು ತಲೆ ಅಲ್ಲಾಡಿಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು