Sunday, February 2, 2025
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮೋದಿ ಸರ್ಕಾರದ ಸರ್ವಸ್ಪರ್ಶಿ ಬಜೆಟ್ – ಶಾಸಕ ಕಾಮತ್ -ಕಹಳೆ ನ್ಯೂಸ್

ಮಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಮಂಡಿಸಿದ ದಾಖಲೆಯ ಎಂಟನೇ ಬಾರಿಯ 2025-26 ನೇ ಸಾಲಿನ ವಿಕಸಿತ ಬಜೆಟ್‌ ನವ ಭಾರತಕ್ಕೆ ಹೊಸ ಶಕ್ತಿಯನ್ನು ತುಂಬುವುದರ ಜೊತೆಗೆ ರಾಷ್ಟ್ರವು ಜಾಗತಿಕ ಮಟ್ಟದಲ್ಲಿ ಸದೃಢವಾಗಿ ಬೆಳೆಯುತ್ತಿರುವುದರ ಸಂಕೇತವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಹೇಳಿದರು.

ಬಜೆಟ್ ನಲ್ಲಿ ತೆರಿಗೆದಾರರಿಗೆ 12 ಲಕ್ಷದವರೆಗಿನ ಆದಾಯ ತೆರಿಗೆ ರದ್ದುಪಡಿಸಿರುವುದು ಅತ್ಯಂತ ದೊಡ್ಡ ನಿರ್ಧಾರವಾಗಿದ್ದು, ಕ್ಯಾನ್ಸರ್‌ ಔಷಧ, ಎಲೆಕ್ಟ್ರಿಕ್‌ ವಾಹನಗಳು, ಮೊಬೈಲ್‌ ಫೋನ್, ಎಲ್‌ಇಡಿ ಟಿವಿ, ಚರ್ಮದ ಉತ್ಪನ್ನಗಳು, ಸ್ವದೇಶಿ ಬಟ್ಟೆಗಳು ಹೀಗೆ ಹತ್ತು ಹಲವು ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದ್ದು ಬಡ ಹಾಗೂ ಮಧ್ಯಮ ವರ್ಗದ ಹರ್ಷಕ್ಕೆ ಕಾರಣವಾಗಿದೆ. ಸಣ್ಣ, ಮಧ್ಯಮ ಉದ್ದಿಮೆದಾರರಿಗೆ 20 ಕೋಟಿವರೆಗೆ ಸಾಲ, ಎಸ್ಸಿ ಎಸ್ಟಿ ಮಹಿಳಾ ಉದ್ದಿಮೆದಾರರಿಗೆ 2 ಕೋಟಿವರೆಗೆ ವಿಶೇಷ ಸಾಲ, ಬೀದಿಬದಿ ವ್ಯಾಪಾರಿಗಳಿಗೆ ಸಾಲ, ಕೃಷಿಕರಿಗೆ-ಮಹಿಳೆಯರಿಗೆ-ಯುವಕರಿಗೆ- ಹಿರಿಯರಿಗೆ ವಿಶೇಷ ಆದ್ಯತೆ ಹೀಗೆ ಪ್ರತಿಯೊಂದು ಕ್ಷೇತ್ರಕ್ಕೂ ವಿಶೇಷವಾಗಿ ಗಮನ ಹರಿಸಲಾಗಿರುವ ಸರ್ವಸ್ಪರ್ಶಿ ಬಜೆಟ್ ಇದಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಎಂದಿನಂತೆ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಹತಾಶೆಯಲ್ಲಿ ಅನಗತ್ಯ ಟೀಕೆ ಮಾಡುತ್ತಿದ್ದರೂ ದೇಶದ ಜನತೆ ಅದಕ್ಕೆಲ್ಲ ಹೆಚ್ಚಿನ ಪ್ರಾಶಸ್ತ್ಯ ನೀಡದೇ ಈ ಬಾರಿಯ ಕೇಂದ್ರದ ಬಜೆಟ್ ನಿಂದ ಸಂತಸಗೊಂಡಿರುವುದು ಗಮನಾರ್ಹ ಸಂಗತಿ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು