ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಅಭ್ಯರ್ಥಿಗಳು 12 ರಲ್ಲಿ 12 ಕ್ಲೀನ್ ಸ್ವೀಪ್ ಗೆಲುವು-ಕಹಳೆ ನ್ಯೂಸ್
ಉಪ್ಪಿನoಗಡಿ : ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಅಭ್ಯರ್ಥಿಗಳು 12 ರಲ್ಲಿ 12 ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ.
ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಅಭ್ಯರ್ಥಿಗಳು ಸಾಮಾನ್ಯ ಕ್ಷೇತ್ರದಿಂದ ವಸಂತ. ಪಿ., ಶ್ರೀರಾಮ , ಸದಾನಂದ ಶೆಟ್ಟಿ.ಜಿ, ಸುಬ್ರಮಣ್ಯ ಕುಮಾರ್ ಅಗರ್ತ, ಮಹಿಳಾ ಮೀಸಲು ಕ್ಷೇತ್ರದಲ್ಲಿ ಉಷಾ, ಸಂಧ್ಯಾ, ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಲ್ಲಿ ಸುನೀಲ್.ದಡ್ದು, ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರ ದಲ್ಲಿ ದಯಾನಂದ. ಎಸ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಸುಂದರ.ಕೆ, ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ರಾಘವ. ನಾಯ್ಕ, ಸಾಲಗಾರ ಕೃಷಿಯೇತರ ಕ್ಷೇತ್ರದಲ್ಲಿ ರಾಜೇಶ್ ರವರು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭೂತಪೂರ್ವ ಗೆಲುವೂ ಸಾಧಿಸುವ ಮೂಲಕ ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ.