ಎಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ವತಿಯಿಂದ ಹೂಡಿಕೆ ಸಮಾರಂಭ; ಗಿಡಗಳನ್ನು ನೆಟ್ಟು ಪೋಷಿಸುವ ವಿನೂತನ ಕಾರ್ಯಕ್ರಮ-ಕಹಳೆ ನ್ಯೂಸ್
ಮಂಗಳೂರು:ಎಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ವತಿಯಿಂದ ಹೂಡಿಕೆ ಸಮಾರಂಭ (ಇನ್ವೆಸ್ಟೀಚರ್ ಸೆರೆಮನಿ) ಎನ್ನುವ ಕಾರ್ಯಕ್ರಮ ನಡೆಯಿತು.
ಎಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ಆರ್ಥವೆಬ್ಲಾಬ್ಸ್ ಎಂಬ ಕಂಪೆನಿಯೊಂದಿಗೆ ಎಮ್‍ಐಓ ಸಹಿ ಒಪ್ಪಂದ ಮಾಡಿಕೊಂಡಿದ್ದು, ಕಂಪೆನಿಯೊಂದಿಗೆ ಕಾಲೇಜಿನ ವಿದ್ಯಾರ್ಥಿಗಳು ಮೈತ್ರಿಯಲಿರುತ್ತಾರೆ. ಕೆಂಪೆನಿಯು ಕೆಲವು ನಾಯಕರನ್ನು ಆಯ್ಕೆ ಮಾಡಿಕೊಂಡಿದ್ದು, ಸುಸ್ಥಿರ ನಾಯಕತ್ವದ ಸಂಕೇತವಾಗಿ ನಾಯಕರು ಗಿಡಗಳನ್ನು ನೆಟ್ಟು ಅದಕ್ಕೆ ನೀರು, ಅಗತ್ಯತೆಗಳನ್ನು ಹಾಕಿ ಪೋಷಣೆ ಮಾಡುವ ಹೊಸ ಮತ್ತು ವಿಶಿಷ್ಟ ವಿಧಾನವಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ತ್ರಿಶಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್‍ನ ಅಧ್ಯಕ್ಷ ಸಿಎ ಗೋಪಾಲಕೃಷ್ಣ ಭಟ್ ಭಾಗವಹಿಸಿದ್ದು, ಕಾಲೇಜಿನ ಪ್ರಾಂಶುಪಾಲರಾದ ಡಾ ಶಾಂತರಾಮ ರೈ ಸಿ, ಡೀನ್ ಡಾ ಮಹಾಬಲೇಶ್ವರಪ್ಪ, ಉಪ ಪ್ರಾಂಶಪಾಲರಾದ ಡಾ. ಆಂಟೋನಿ ಪಿಜೆ, ಎಂಬಿಎ ಹೆಚ್‍ಓಡಿ ಡಾ ಶರಣ್ ಕುಮಾರ್ ಶೆಟ್ಟಿ, ಇವೆಂಟ್ ಕೋ ಆರ್ಡಿನೇಟರ್ ದಿಶಾ ಸಿ ಶೆಟ್ಟಿ ಭಾಗಿಯಾಗಿದ್ದರು.