Monday, February 3, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಮುಳುಗು ಸೇತುವೆ ಎಂದು ಖ್ಯಾತಿ ಪಡೆದ ಸೇತುವೆ ಇನ್ನೂ ಮುಂದೆ ಸರ್ವಋತು ಸೇತುವೆಯಾಗಿ ನಿರ್ಮಾಣ-ಕಹಳೆ ನ್ಯೂಸ್

ಬೆಟ್ಟಂಪಾಡಿ: ಚೆಲ್ಯಡ್ಕ ಮುಳುಗು ಸೇತುವೆ ಎಂದು ಖ್ಯಾತಿ ಪಡೆದ ಸೇತುವೆ ಇನ್ನೂ ಮುಂದೆ ಸರ್ವಋತು ಸೇತುವೆಯಾಗಿ ನಿರ್ಮಾಣವಾಗಲಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಡೆಯುವ ಕಾಮಗಾರಿಗೆ ಇತ್ತೀಚಿಗಷ್ಟೇ ಶಾಸಕ ಅಶೋಕ್‌ ರೈ ಶಿಲನ್ಯಾಸ ನೆರವೇರಿಸಿದ್ದು ಇದೀಗ ಕಾಮಗಾರಿ ಪ್ರಾರಂಭ ಗೊಂಡಿದೆ.

ಹಳೆಯ ಸೇತುವೆ ಕೆಡವಿ ಹೊಸ ಸೇತುವೆಯ ಪಿಲ್ಲರ್‌ ಅಳವಡಿಸಲು ಅಡಿಪಾಯ ನಿರ್ಮಾಣಕ್ಕೆ ಕಾಮಗಾರಿ ಆಗುತಿದೆ. ಮುಂದಿನ ಮಳೆಗಾಲದ ಒಳಗಡೆ ಕಾಮಗಾರಿ ಮುಗಿದು ಜನರಿಗೆ ದೊರೆಯುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.
ಸೇತುವೆ ಕಾಮಗಾರಿ ಪ್ರಾರಂಭಿಸಿರುವುದರಿಂದ ಈ ಭಾಗದಲ್ಲಿ ಮೇ ತಿಂಗಳ ವರೆಗೆ ಘನ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಈಗಾಗಲೇ ಆದೇಶ ಜಾರಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಣಾಜೆ ಯಿಂದ ಪುತ್ತೂರು ಕಡೆಗೆ ಹೋಗುವ ವಾಹನಗಳು ಸಂಟ್ಯಾರು ರಸ್ತೆ ಮೂಲಕ ಸಂಚರಿಸುತ್ತಿವೆ.ವಿಟ್ಲ ಕಡೆಯಿಂದ ಬೆಟ್ಟಂಪಾಡಿ ಕಡೆಗೆ ಹೋಗುವವರು ದೇವಸ್ಯ- ಬೈರೋಡಿ- ಕಾಪಿಕಾಡು- ಕೈಕಾರು ಮಾರ್ಗದ ಮೂಲಕ ಸಂಚರಿಸುವಂತೆ ಬದಲಾವಣೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

– 20.8ಮೀ. -ಸೇತುವೆಯ ಉದ್ದ, 10ಮೀ. -ಸೇತುವೆಯ ಅಗಲ,5ಮೀ. -ನದಿಯಿಂದ ಎತ್ತರ, 3 ಕೋಟಿ ರೂ. ಸೇತುವೆ ನಿರ್ಮಾಣಕ್ಕೆ ಅಂದಾಜು ವೆಚ್ಚ

ಘನ ವಾಹನ ಸಂಚಾರ?
ಸೇತುವೆಯ ಪುನರ್‌ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಹೊಳೆಯ ನೀರು ಹರಿದು ಹೋಗಲು ಮೂರು ನಾಲ್ಕು ಪೈಪು ಗಳನ್ನು ಅಳವಡಿ ಸಲಾಗಿದೆ. ಇದರ ಮೇಲೆ ಲಘು ವಾಹನ ಸಂಚರಿಸಲು ತಾತ್ಕಾಲಿಕ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.ಆದರೆ ಈಗ ಈ ರಸ್ತೆಯಲ್ಲಿ ಘನ ವಾಹನ ಅನಧಿಕೃತ ವಾಗಿ ಸಂಚರಿಸುತ್ತಿದೆ ಎಂಬ ದೂರುಗಳೂ ಇವೆ.

ಸೇತುವೆ ಪೂರ್ಣಗೊಳಿಸಲು ಒಂದು ವರ್ಷದ ಅವಧಿ ಇದ್ದರೂ ಮುಂದಿನ ಮಳೆಗಾಲಕ್ಕೆ ಜನರಿಗೆ ಸಿಗುವಂತೆ ಮಾಡಲು ಶಾಸಕರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಒತ್ತಡ ಹೇರಲಾಗುವುದು ಎಂದು ಬೆಟ್ಟಂಪಾಡಿ ಗ್ರಾಮ ಪಂಚಾಯತ್‌ ಸದಸ್ಯ ನವೀನ್‌ ರೈ ಹೇಳಿದ್ದಾರೆ.