Tuesday, February 4, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಯುವಪತ್ರಕರ್ತ-ಸಂವಾದ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು: ಪತ್ರಿಕೋದ್ಯಮದಲ್ಲಿ ಇಂದು ವಿಫುಲವಾದ ಉದ್ಯೋಗವಕಾಶಗಳಿವೆ. ಫೊಟೋಗ್ರಫಿ, ಸಂಕಲನ ಹಾಗೂ ಬರವಣಿಗೆಯಲ್ಲಿ ಸೂಕ್ತ ತರಬೇತಿಯನ್ನು ಪಡೆದುಕೊಂಡರೆ ಇಂದು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ವಿದ್ಯಾರ್ಥಿ ಹಂತದಲ್ಲಿಯೇ ಪ್ರಸ್ತುತ ವಿಷಯಗಳ ಬಗ್ಗೆ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವAತಹ ವಿಷಯಗಳ ಮೇಲೆ ಲೇಖನವನ್ನು ಬರೆದಾಗ ಜನರು ಓದಲು ಹೆಚ್ಚಿನ ಒಲವನ್ನು ತೋರುತ್ತಾರೆ. ಹಾಗಾಗಿ ಮಾನವಾಸಕ್ತಿ ವಿಚಾರಗಳನ್ನು ಗುರುತಿಸಿ ಬರೆಯುವುದರಿಂದ ನಮ್ಮದೇ ಆದ ಓದುಗ ಬಳಗವನ್ನು ವಿದ್ಯಾರ್ಥಿಗಳು ಕಟ್ಟಿಕೊಳ್ಳಬಹುದು ಎಂದು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ ಹಾಗೂ ಮುಂಬಯಿಯ ಸ್ಟಾರ್ ಸ್ಪೋರ್ಟ್ಸ್ ನ ಲೈವ್ ಪ್ರೊಡ್ಯೂಸರ್ ಸಂದೀಪ್.ಎಸ್ ಮಂಚಿಕಟ್ಟೆ ನುಡಿದರು.

ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ )ಮಹಾವಿದ್ಯಾಲಯ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ಇಲ್ಲಿಯ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ಯುವಪತ್ರಕರ್ತ- ಸಂವಾದ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಪಿ. ಆರ್ ನಿಡ್ಪಳ್ಳಿ ಮಾತನಾಡಿ, ಜೀವನದಲ್ಲಿ ಸತತ ಪ್ರಯತ್ನ ಹಾಗೂ ಪರಿಶ್ರಮ ಪಟ್ಟಾಗ ಮಾತ್ರ ನಾವು ಅಂದುಕೊAಡ ಗುರಿಯನ್ನು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಯಶಸ್ವಿಯಾಗಿ ತಮ್ಮ ಬದುಕನ್ನು ಕಟ್ಟಿಕೊಂಡಾಗ ಶಿಕ್ಷಕರಿಗೆ ಹಾಗೂ ವಿದ್ಯಾಸಂಸ್ಥೆಗೆ ಹೆಮ್ಮೆಯ ವಿಚಾರ. ಹಾಗಾಗಿ ನಾವು ಮಾಡಿದ ಸಾಧನೆ ಇತರರಿಗೆ ಮಾದರಿಯಾಗಿರಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಹವ್ಯಾ ಶ್ರೀ ಪಾಲ್ತಾಡಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತೃತೀಯ ಬಿಎ ವಿದ್ಯಾರ್ಥಿನಿ ಹರ್ಷಿತಾ ವಂದಿಸಿ , ಕಾರ್ಯಕ್ರಮದ ಕಾರ್ಯದರ್ಶಿ ಲತಾ ಚೆಂಡೆಡ್ಕ ನಿರ್ವಹಿಸಿದರು.