ದ್ವಾರಕಾ ಪ್ರತಿಷ್ಠಾನ ದ ವತಿಯಿಂದ ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ ಕಂಪ್ಯೂಟರ್ ಹಸ್ತಾಂತರ – ಕಹಳೆ ನ್ಯೂಸ್
ದಿನಾಂಕ: 4-2-2025 ರಂದು ದ್ವಾರಕಾ ಕಾರ್ಪೋರೇಶನ್ ಪ್ರೈ ಲಿ ಇದರ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನ (ರಿ ) ಪುತ್ತೂರು ಇವರ ವತಿಯಿಂದ ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ ಉಚಿತ ಕಂಪ್ಯೂಟರ್ ನ್ನು ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಭಟ್ ಇವರು ಠಾಣೆಯ ಉಪನಿರೀಕ್ಷಕರಾದ ಶ್ರೀ ಉದಯರವಿ ಎಂ ವೈ ಯವರಿಗೆ ಹಸ್ತಾಂತರಿಸಿದರು.
ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಪ್ರತಿನಿತ್ಯದ ಕೆಲಸ ಕಾರ್ಯಗಳನ್ನು ನಿರ್ಹವಿಸಲು ಕಂಪ್ಯೂಟರ್ ನ ಅವಶ್ಯಕತೆಯಿದ್ದು, ಕಂಪ್ಯೂಟರ್ ನ್ನು ಒದಗಿಸಿಕೊಡಬೇಕಾಗಿ ದ್ವಾರಕಾ ಪ್ರತಿಷ್ಠಾನಕ್ಕೆ ನೀಡಿದ ಮನವಿಯ ಪ್ರಕಾರ ಕಂಪ್ಯೂಟರನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ಮಾತನಾಡುತ್ತಾ, ಸಮಾಜದ ಮುನ್ನೆಲೆಗೆ ಇನ್ನೂ ಬಾರದ ಸಹಾಯ ಹಸ್ತಕ್ಕೆ ಅರ್ಹರಾದ ಅದೆಷ್ಟೋ ವ್ಯಕ್ತಿಗಳು, ಕುಟುಂಬಗಳು ಹಾಗು ಪ್ರದೇಶಗಳು ಇದ್ದು ಅವರಿಗೆ ಅನೂಕೂಲವಾಗುವಂತಹ ಸಹಾಯ ಕಾರ್ಯಗಳು ನಡೆಯಬೇಕಂದು ಚರ್ಚಿಸಿದರು. ಸಂಚಾರ ಠಾಣೆಯ ಪರವಾಗಿ ಉಪನಿರ್ದೇಶಕರಾದ ಶ್ರೀ ಉದಯರವಿ ಎಂ ವೈ ಇವರು ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಭಟ್ ಇವರಿಗೆ ಕೃತಜ್ಞತಾ ಪೂರ್ವಕವಾಗಿ ಸನ್ಮಾನಿಸಿದರು. ಈ ಸಂಧರ್ಭದಲ್ಲಿ ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀಯುತ ಅಮೃತಕೃಷ್ಣ, ಸಂಸ್ಥೆಯ ಸಿಬ್ಬಂದಿಗಳು ಹಾಗೂ ಠಾಣೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.