Wednesday, February 5, 2025
ಉಡುಪಿಕಾಪುಜಿಲ್ಲೆಸಂತಾಪಸುದ್ದಿ

ಕಾರು ಮತ್ತು ಟಿಪ್ಪರ್ ಮದ್ಯೆ ಭೀಕರ ಅಫಘಾತ.ಟಿಪ್ಪರ್ ಅಡಿಗೆ ಬಿದ್ದು ಚಾಲಕ ಸಾವು-ಕಹಳೆ ನ್ಯೂಸ್

ಶಂಕರಪುರ : ಕಾರ್ ಮತ್ತು ಟಿಪ್ಪರ್ ಮದ್ಯೆ ಅಫಘಾತ ನಡೆದು ಟಿಪ್ಪರ್ ಚಾಲಕ ತನ್ನದೇ ಟಿಪ್ಪರ್ ಅಡಿಗೆ ಬಿದ್ದು ಮೃತನಾದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಕಾಪು ತಾಲೂಕಿನ ಶಂಕರಪುರ ದುರ್ಗಾ ನಗರ ಎಂಬಲ್ಲಿ ನಡೆದ ಘಟನೆ ನಡೆದಿದೆ. ಶಿರ್ವ ದಿಂದ ಕಟಪಾಡಿ ಕಡೆಗೆ ಅತೀ ವೇಗದಿಂದ ಬರುತ್ತಿದ್ದ ಟಿಪ್ಪರ್ ಎದುರಿನಿಂದ ಬಂದ ಕಾರ್ ಗೆ ಢಿಕ್ಕಿ ಹೊಡೆದಿದೆ.ಢಿಕ್ಕಿ ಯ ರಭಸಕ್ಕೆ ಟಿಪ್ಪರ್ ಮಗುಚಿ‌ಬಿದ್ದಿದೆ.ಮಗುಚಿ ಬೀಳುವ ಸಂಧರ್ಭ ಚಾಲಕ ಟಿಪ್ಪರ್ ನಿಂದ‌ ಹೊರಗೆ ಹಾರಿ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದು ದುರಾದೃಷ್ಟವಶಾತ್ ಚಾಲಕ ಟಿಪ್ಪರ್ ನ ಅಡಿಗೆ ಬಿದ್ದು ಮೃತನಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಫಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿ ದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.ಸ್ಥಳಕ್ಕೆ ಅಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು