ಪುತ್ತೂರು ಸಮೀಪದ ಮುರ ಎಂಬಲ್ಲಿ ಮಂಗಳವಾರ ತಡರಾತ್ರಿ ರಿಕ್ಷಾ ಡಿಕ್ಕಿ ಹೊಡೆದು ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ವಾರ್ತಾ ವಾಹಿನಿಯೊಂದರ ವಿಡಿಯೊಗ್ರಾಫರ್ ಚೇತನ್ ಕುಮಾರ್ ಕೆಮ್ಮಿಂಜೆ ಎಂದು ಗುರುತಿಸಲಾಗಿದೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಬಕದಿಂದ ಮುರದ ಕಡೆಗೆ ಸಾಗುತ್ತಿದ್ದ ಬೈಕಿಗೆ ಎದುರಿನಿಂದ ಬಂದ ರಿಕ್ಷಾವು ಡಿಕ್ಕಿ ಹೊಡೆದಿತ್ತು.
ಬೈಕ್ ಸವಾರ ಚೇತನ್ ಹಾಗೂ ಸಹ ಸವಾರ ಮನೀಶ್ ರಸ್ತೆಗೆ ಬಿದ್ದು, ಇಬ್ಬರೂ ಗಾಯಗೊಂಡಿದ್ದರು.
ರಿಕ್ಷಾ ಚಾಲಕ ಮಹಮ್ಮದ್ ತೌಸಿಫ್ ಅವರಿಗೂ ಗಾಯಗಳಾಗಿದ್ದವು. ಮೂವರು ಗಾಯಾಳುಗಳನ್ನು ಅಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಚೇತನ್ ಬುಧವಾರ ಮುಂಜಾನೆ ಕೊನೆಯುಸಿರೆಳೆದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.