Wednesday, February 5, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ಮಹಾಲಿಂಗೇಶ್ವರ ದೇಗುಳಕ್ಕೆ ಸೇರಿದ ಜಾಗದಲ್ಲಿದ್ದ ರಾಜೇಶ್ ಬನ್ನೂರು ಮನೆ ನೆಲ ಸಮ- ಕಹಳೆ ನ್ಯೂಸ್

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಕಾರ್ಯಕ್ಕೆ ತೊಂದರೆಯಾಗಿದ್ದ ದೇಗುಲದ ಜಾಗದಲ್ಲಿದ್ದ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರ ಮನೆ ನೆಲ ಸಮವಾಗಿದೆ.
ನಿನ್ನೆ ತಡ ರಾತ್ರಿ ನೆಲಸಮಗೊಳಿಸಿದ್ದು ಯಾರು ತೆರವು ಗೊಳಿಸಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ದೇವಳದ ಅಭಿವೃದ್ಧಿಗಾಗಿ ಕೆಲ ದಿನಗಳಿಂದ ದೇಗುಲದ ವತಿಯಿಂದ ಬಾಡಿಗೆಯಲ್ಲಿದ್ದ ಮನೆಗಳ ತೆರವು ಕಾರ್ಯಾಚರಣೆ ನಡೆದಿತ್ತು. ರಾಜೇಶ್ ಬನ್ನೂರು ಹಾಗೂ ಉಜಿರೆ ನಿವಾಸಿ ವಕೀಲರೊಬ್ಬರ ಮನೆ ತರವಿಗೆ ಒಪ್ಪಿಗೆ ಸಿಕ್ಕಿರಲಿಲ್ಲ.

ಎರಡು ದಿನಗಳ ಹಿಂದೆ . ಉಜಿರೆ ನಿವಾಸಿ ವಕೀಲರಿಗೆ ಸೇರಿದ ಮನೆ ಗೆ ಜೆಸಿಬಿ ಯಂತ್ರ ಕೆಲಸ ಮಾಡುತ್ತಿದ್ದ ವೇಳೆ ಮರ ಬಿದ್ದು ಹಾನಿಯಾಗಿತ್ತು . ಬಳಿಕ ಅದನ್ನು ತೆರವುಗೊಳಿಸಲಾಗಿತ್ತು. ನಿನ್ನೆ ತಡ ರಾತ್ರಿ ರಾಜೇಶ್ ಬನ್ನೂರಿಗೂ ಸೇರಿದ ಮನೆಯೂ ನೆಲಸಮವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು