Friday, September 20, 2024
ಸುದ್ದಿ

Breaking News : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಂಗಳೂರಿನಲ್ಲಿಯೇ ಮೂಹುರ್ತ ಫಿಕ್ಸ್ ; ಸಂಘ ಪರಿವಾರದ ಅಖಿಲ ಭಾರತೀಯ ಭೈಠಕ್ ನಲ್ಲಿ ಅಮಿತ್ ಷಾ ಭಾಗಿ – ಕಹಳೆ ನ್ಯೂಸ್

ಮಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಹೂರ್ತ ನಿಗದಿ ಮಾಡಲು ಮುಂದಾಗಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ.

ಗುರುವಾರ ಸಂಘನಿಕೇತನದಲ್ಲಿ ನಡೆಯುತ್ತಿರುವ ಆರ್‍ಎಸ್‍ಎಸ್ ಅಖಿಲ ಭಾರತ ಬೈಠಕ್‍ನಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಈ ವೇಳೆ ದೇಶದ ವಿವಿಧ ಪ್ರದೇಶಗಳಿಂದ 400ಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಿಲಿದ್ದಾರೆ. ಕಾರ್ಯಕ್ರಮದ ಪೂರ್ವ ಸಿದ್ಧತೆ ಉದ್ದೇಶದಿಂದ ಅಮಿತ್ ಶಾ ಮಂಗಳವಾರ ಸಂಜೆಯೇ ನಗರಕ್ಕೆ ಭೇಟಿ ನೀಡಿ ವಾಸ್ತವ್ಯ ಹೂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಮಿತಾ ಶಾ ನೇತೃತ್ವದ ಬೈಠಕ್‍ನಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಲೋಕಸಭಾ ಚುನಾವಣೆ ಕುರಿತು ಚರ್ಚೆ ನಡೆಯಲಿದೆ. ಹೀಗಾಗಿ ರಾಮ ಮಂದಿರದ ನಿರ್ಮಾಣದ ಕೂಗಿಗೆ ಮಂಗಳೂರಿನಿಂದಲೇ ಮುಹೂರ್ತ ನಿಗದಿ ಮಾಡಲಾಗುತ್ತಿದೆಯಂತೆ. ಮಂಗಳೂರು ಅಷ್ಟೇ ಅಲ್ಲದೆ ವಾರಣಾಸಿಯಲ್ಲಿಯೂ ಏಕಾಲದಲ್ಲಿ ಬೈಠಕ್ ಆಯೋಜಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಾಹೀರಾತು

ಅಖಿಲ ಭಾರತ ಬೈಠಕ್ ನವೆಂಬರ್ 8ರಂದು ಆರಂಭವಾಗಿದ್ದು, 16ರವರೆಗೆ ನಡೆಯಲಿದೆ. ಅತ್ಯಂತ ಗೌಪ್ಯವಾಗಿ ಬೈಠಕ್ ಕಾರ್ಯಕ್ರಮ ಸಂಘ ಪರಿವಾರದ ನಾಯಕರು ನಡೆಸುತ್ತಿದ್ದಾರೆ. ಹೀಗಾಗಿ ಅಮಿತ್ ಶಾ ಅವರು ಗುರುವಾರ ಬೈಠೆಕ್ ಕಾರ್ಯಕ್ರಮದ ಭಾಗವಹಿಸಿ, ಲೋಕಸಭಾ ಚುನಾವಣಾ ಸಿದ್ಧತೆ, ರಾಮ ಮಂದಿರ ನಿರ್ಮಾಣದ ಕುರಿತಾಗಿ ಚರ್ಚೆ ನಡೆಸಲಿದ್ದಾರೆ. ಸಂಘಟನೆಯ ಸ್ಥಳೀಯ ಮುಂಖಡರ ನಿಲುವು ತಿಳಿದು ದೆಹಲಿಗೆ ಮರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.