Thursday, February 6, 2025
ಸುದ್ದಿ

ಉಡುಪಿಯ ಪಲಿಮಾರು ಮಠದ ಪೂಜ್ಯ ಸ್ವಾಮೀಜಿಯವರೊಂದಿಗೆ ಪ್ರಯಾಗ್ ರಾಜ್‌ ಕುಂಭ ಮೇಳದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡ – ಕಹಳೆನ್ಯೂಸ್

ಮಹಾಕುಂಭ ಮೇಳದಲ್ಲಿ ಪ್ರಯಾಗ್ ರಾಜ್ ನ ಪಲಿಮಾರು ಮಾಧ್ವ ಮಠದಲ್ಲಿ ಶ್ರೀ ಶ್ರೀ ಶ್ರೀ ವಿಧ್ಯಾಧೀಶ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಅಧ್ಯಕ್ಷರಾದ ಶ್ರೀ ಸತೀಶ್ ಶೆಟ್ಟಿ ಪಟ್ಲ ನೇತೃತ್ವದ ಕೇಂದ್ರೀಯ ಸಮಿತಿಯ ತಂಡವನ್ನು ಪೂಜ್ಯ ಸ್ವಾಮೀಜಿಯವರ ಶಿಷ್ಯ ವೃಂದದವರು ಆತ್ಮೀಯವಾಗಿ ಸ್ವಾಗತಿಸುವುದರೊಂದಿಗೆ ಊಟ ಫಲಹಾರಗಳನ್ನು ನೀಡಿ ಸತ್ಕರಿಸಿದರು.

ಬ್ರಾಹ್ಮೀ ಮುಹೂರ್ತದಲ್ಲಿ ತ್ರಿವೇಣಿ ಸಂಗಮದ ಪುಣ್ಯ ತೀರ್ಥ ಸ್ನಾನವು ಸ್ವಾಮೀಜಿಯವರ ನೇತೃತ್ವದಲ್ಲಿ ನೆರವೇರಿತು.ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ, ಕೋಶಾಧಿಕಾರಿ CA ಸುರೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ಅಶೋಕನಗರ ಮತ್ತು ಡಾ. ಪ್ರಖ್ಯಾತ್ ಶೆಟ್ಟಿ ತಂಡದಲ್ಲಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು