Thursday, February 6, 2025
ಸುದ್ದಿ

ಅಮೆರಿಕದಿಂದ ಗುಜರಾತಿಗೆ ಬಂದಿಳಿದ 33 ಅಕ್ರಮ ವಲಸಿಗರು – ಕಹಳೆನ್ಯೂಸ್

ಅಮೆರಿಕದಿಂದ ಗಡೀಪಾರಾಗಿರುವ 104 ಭಾರತೀಯರು ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾನಕ್ಕೆ ಬಂದಿಳಿದರು. ಅಮೆರಿಕದಿಂದ ಬಂದವರ ಪೈಕಿ 33 ಜನರು ಗುಜರಾತ್‌ ಮೂಲದವರಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇವರನ್ನು ಹೊತ್ತ ವಿಮಾನವು ಅಮೃತಸರದಿಂದ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ 33 ವಲಸಿಗರನ್ನು ಪೊಲೀಸ್ ವಾಹನಗಳಲ್ಲಿ ಅವರವರ ಮನೆಗಳಿಗೆ ತಲುಪಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಆರ್‌ಡಿ ಓಜಾ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿದ ಆರ್‌ಡಿ ಓಜಾ ಅವರು, ‘ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 33 ಗುಜರಾತಿ ವಲಸಿಗರನ್ನು ಹೊತ್ತ ವಿಮಾನವು ಬೆಳಿಗ್ಗೆ ಅಮೃತಸರದಿಂದ ಅಹಮದಾಬಾದ್‌ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಅಮೆರಿಕದಿಂದ ಗಡೀಪಾರು ಮಾಡಲಾದವರಲ್ಲಿ 33 ಜನರು ಗುಜರಾತಿಗಳಾಗಿದ್ದಾರೆ. ಅವರನ್ನು ಅವರವರ ಮನೆಗಳಿಗೆ ಸಾಗಿಸಲು ನಾವು ವಿಮಾನ ನಿಲ್ದಾಣದಲ್ಲಿ ಪೊಲೀಸ್ ವಾಹನಗಳನ್ನು ನಿಯೋಜಿಸಿದ್ದೆವು’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗಡೀಪಾರು ಮಾಡಲಾದ ವಲಸಿಗರೊಂದಿಗೆ ಮಾಧ್ಯಮ ಪ್ರತಿನಿಧಿಗಳು ಮಾತನಾಡಲು ಪ್ರಯತ್ನಿಸಿದಾಗ ಸಂದರ್ಭದಲ್ಲಿ ವಲಸಿಗರು ಏನನ್ನೂ ಹೇಳಲು ನಿರಾಕರಿಸಿದರು ಎಂದು ತಿಳಿದುಬಂದಿದೆ. ಆ ನಂತರ ಪೊಲೀಸ್ ವಾಹನಗಳಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಿದರು ಎಂಬುದಾಗಿ ವರದಿಯಾಗಿದೆ.

ಅಕ್ರಮ ವಲಸಿಗರಲ್ಲಿ ಹೆಚ್ಚಿನವರು ಮೆಹ್ಸಾನಾ, ಗಾಂಧಿನಗರ, ಪಠಾಣ್, ವಡೋದರಾ ಮತ್ತು ಖೇಡಾ ಜಿಲ್ಲೆಗಳವರು ಎಂದು ಮೂಲಗಳು ತಿಳಿಸಿವೆ. ಗುಜರಾತಿನ 33 ಮಂದಿ ಸೇರಿದಂತೆ 104 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನವು ಬುಧವಾರ ಪಂಜಾಬ್‌ನ ಅಮೃತಸರದಲ್ಲಿ ಬಂದಿಳಿಯಿತು.

ಮಾಧ್ಯಮಗಳೊಂದಿಗೆ ಮಾತನಾಡಿದ ಅಕ್ರಮ ವಲಸಿಗರ ಕುಟುಂಬ ಸದಸ್ಯರು, ತಮ್ಮ ಸಂಬಂಧಿಗಳು ಅಮೆರಿಕವನ್ನು ಹೇಗೆ ತಲುಪಿದರು ಎಂಬುದಾಗಿ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಕ್ರಮ ವಲಸಿಗರ ಕುರಿತು ಮಾತನಾಡಿರುವ ಗುಜರಾತಿನ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಗಡೀಪಾರು ಮಾಡಲಾದ ಗುಜರಾತಿಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಅಕ್ರಮ ವಲಸಿಗರು ಉದ್ಯೋಗ ಅಥವಾ ವೃತ್ತಿಜೀವನವನ್ನು ಹುಡುಕಿಕೊಂಡು ವಿದೇಶಕ್ಕೆ ತೆರಳಿದ್ದಾರೆ ಎಂಬುದಾಗಿ ತಿಳಿಸಿದರು.

ಅಪರಾಧ ವಿಭಾಗದ ಉಪ ಪೊಲೀಸ್ ಮಹಾನಿರ್ದೇಶಕಿ ಪರೀಕ್ಷಿತಾ ರಾಥೋಡ್ ಮಾತನಾಡಿ, ಅಮೆರಿಕದಿಂದ ಗಡೀಪಾರು ಮಾಡಲಾದವರನ್ನು ನಾವು ವಿಚಾರಣೆಗೆ ಒಳಪಡಿಸುವುದಿಲ್ಲವೆಂದು ಹೇಳಿದರು.