ತಡರಾತ್ರಿವರೆಗೆ ಯಕ್ಷಗಾನ – ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿ ಯಕ್ಷಗಾನ ನಿಲ್ಲಿಸಿದ ಪೊಲೀಸರು – ಕಹಳೆನ್ಯೂಸ್
![](https://www.kahalenews.com/wp-content/uploads/2025/02/Capture-750x450.jpg)
ಉಡುಪಿ : ಉಡುಪಿಯ ಅಲೆವೂರಿನಲ್ಲಿ ತಡರಾತ್ರಿ ನಡೆಯುತ್ತಿದ್ದ ಯಕ್ಷಗಾನವನ್ನು ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಬಂದು ನಿಲ್ಲಿಸಿದ ಪ್ರಸಂಗ ನಡೆದಿದೆ.
ಅಲೆವೂರಿನ ಸಂಕಲ್ಪ ಸಂಭಾಂಗಣದಲ್ಲಿ 12-30 ತನಕ ಯಕ್ಷಗಾನ ನಡೆಯುತ್ತಿತ್ತು. ಮಡಾಮಕ್ಕಿ ಮೇಳದವರು ಈ ಯಕ್ಷಗಾನ ಪ್ರಸಂಗ ನಡೆಸುತ್ತಿದ್ದರು. ತಡರಾತ್ರಿಯಾದ ಕಾರಣ ಯಾರೋ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯಕ್ಷಗಾನ ನಿಲ್ಲಿಸುವಂತೆ ಮನವಿ ಮಾಡಿದ್ದು, ಅದರಂತೆ ಯಕ್ಷಗಾನ ನಿಲ್ಲಿಸಲಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.