ದಿ ಕಾಮನ್ ಪೀಪಲ್ ವೆರ್ ಫೌಂಡೇಶನ್ ಮತ್ತು ತುಳುನಾಡ ರಕ್ಷಣಾ ವೇದಿಕೆ ಜಂಟಿ ಯಾಗಿ ಉಡುಪಿ ಜಿಲ್ಲಾ ಧಿಕಾರಿಯವರ ಕಚೇರಿ ಮುಂದೆ ಬ್ರಹತ್ ಮುಸ್ಕರ ಮತ್ತು ಉಪವಾಸ ಸತ್ಯಾಗ್ರಹ ಕಾರ್ಯಕ್ರಮ-ಕಹಳೆ ನ್ಯೂಸ್
![](https://www.kahalenews.com/wp-content/uploads/2025/02/WhatsApp-Image-2025-02-07-at-3.08.57-PM-750x450.jpeg)
ಉಡುಪಿ : ಕಾರ್ಮಿಕರಿಗೆ ಮೋಸ ವಾಗುತ್ತಿದೆ, ಎಲ್ಲಾ ರೀತಿ ಯ ಸವಲತ್ತು ಗಳಿಂದಲು ವಂಚನೆ ಯಾಗುತ್ತಿದೆ ಸರಕಾರ ವಾಗಲಿ, ಅಧಿಕಾರಿಗಳಗಲಿ ಕಾರ್ಮಿಕ ರೊಂದಿಗೆ ಸರಿಯಾಗಿ ನಡೆದು ಕೊಲ್ಲದಿದ್ದ ರೆ ಉಗ್ರ ಹೋರಾಟ ಮೂಲಕ ನ್ಯಾಯ ದೊರಕಿಸಿ ಕೊಳ್ಳುವಲ್ಲಿ ನಾವು ಸದಾ ಸಿದ್ದ ಎಂದು ಉಡುಪಿ ಜಿಲ್ಲಾ ತುಳುನಾಡ ರಕ್ಷಣಾ ವೇದಿಕೆ ಯ ಕಾರ್ಮಿಕ ಸಂಘ ಟನೆ ಯ ಅಧ್ಯಕ್ಷ ರಾದ ಜಯ ಪೂಜಾರಿ ಎಚ್ಚರಿಕೆ ನೀಡಿದರು.
ದಿ ಕಾಮನ್ ಪೀಪಲ್ ವೆರ್ ಫೌಂಡೇಶನ್ ಮತ್ತು ತುಳುನಾಡ ರಕ್ಷಣಾ ವೇದಿಕೆ ಜಂಟಿ ಯಾಗಿ ಉಡುಪಿ ಜಿಲ್ಲಾ ಧಿಕಾರಿ ಯವರ ಕಚೇರಿ ಮುಂದೆ ಬ್ರಹತ್ ಮುಸ್ಕರ ಮತ್ತು ಉಪವಾಸ ಸತ್ಯಾಗ್ರಹ ಕಾರ್ಯಕ್ರಮ ದಲ್ಲಿ ಕಾರ್ಮಿಕರ ಪರ ಹೋರಾಟ ಗಾರ ಗೋಪಾಲ ಯ್ಯ ಅಪ್ಪು ಕೋಟೆ ಯವರು ದಿ ಕಾಮನ್ ಪೀಪಲ್ ಫೌಂಡೇಶನ್ ಕಳೆದ 8 ವರ್ಷಗಳಿಂದ ಉಡುಪಿ ಜಿಲ್ಲೆಗಾಗಿ ಒಂದು ಕಾರ್ಮಿಕ ವಿಮಾ ಯೋಜನೆಯ ಅಡಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟವನ್ನು ಪತ್ರಾಂದೋಲನವನ್ನು ಬೃಹತ್ ಮುಷ್ಕರವನ್ನು ಹಾಗೂ ಫೌಂಡೇಶನ್ ಅಧ್ಯಕ್ಷರು ಉಪವಾಸ ಸತ್ಯಾಗ್ರವನ್ನು ಕೈಗೊಂಡ ನಂತರ ನಮ್ಮ ಸರಕಾರವು ಭರವಸೆಯನ್ನು ಕೊಟ್ಟು ಆಸ್ಪತ್ರೆಗೆ ಬೇಕಾಗುವ ಹಣ ಗಳನ್ನು ಮಂಜೂರಾತಿಯನ್ನು ಮಾಡಿದ ನಂತರ ಕೂಡ ನಮ್ಮ ಕಾರ್ಮಿಕ ವಿಮಾ ಯೋಜನೆ ಅಧಿಕಾರಿಗಳಾಗಲಿ, ರಾಜ್ಯ ಸರ್ಕಾರವಾಗಲಿಕೇಂದ್ರ ಸರಕಾರ ವಾಗಲಿ ಕಾರ್ಮಿಕ ಸಚಿವರಾಗಲಿ ಯಾವುದೇ ಕಾನೂನಾತ್ಮಕವಾದ ಕ್ರಮವನ್ನು ಕೈಕೊಳ್ಳಲಿಲ್ಲ ಇದಕ್ಕೆ ಕಾರಣ ನಮಗೆ ತಿಳಿಯಲಿಲ್ಲ ಕಾರ್ಮಿಕ ವಿಮಾ ಯೋಜನೆ ಬಡ ಕಾರ್ಮಿಕರಿಗಾಗಿ ಮಾಡಿದ ಒಂದು ನಿಯಮವಾಗಿದೆ ಇದು ಆರೋಗ್ಯದ ಹಿತಕರಕ್ಕಾಗಿ ಹಾಗೂ ಕಾರ್ಮಿಕರಿಂದ ದೇಶದ ಉನ್ನತಿಯಾಗಬೇಕೆಂಬು ಕಾರಣದಿಂದ ನಮ್ಮ ಹಿರಿಯ ನಾಗರಿಕರು ಹಿರಿಯ ಮುಖಂಡರು ಕಾರ್ಮಿಕ ಸಂಘಟನೆಗಳು ಒಟ್ಟಾಗಿ 1948 ರಲ್ಲಿ ಮಾಡಿದ ಈ ಕಾನೂನು ಕಾರ್ಮಿಕ ಕುಟುಂಬಕ್ಕೆ ಆರೋಗ್ಯ ಸಿಗಲಿ ದೇಶದ ಪ್ರಗತಿಯಾಗಲಿ ಎಂಬ ಭಾವನೆಯಿಂದ ಕಾರ್ಮಿಕರೇ ಇದಕ್ಕೆ ಹಣ ಸಂಗ್ರಹವನ್ನು ಮಾಡಿ ಅವರ ವೇತನದಿಂದ ಹಣವನ್ನು ಕಡಿತ ಮಾಡಿ ಕಾರ್ಮಿಕ ವಿಮಾ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ನೌಕರರು ಹಾಗೂ ಮಾಲೀಕರ ಹಣವನ್ನು ಈ E.S.I.C ಖಾತೆಗಳಿಗೆ ಕಾರ್ಮಿಕರ ಆರೋಗ್ಯಕ್ಕಾಗಿ ಅದನ್ನು ಖರ್ಚು ಮಾಡುವ ಉದ್ದೇಶದಿಂದ ಮಾಡಿದ ಈ ಕಾನೂನು ಪ್ರತಿಯೊಂದು ಕಾರ್ಮಿಕರಿಗೂ ಆರೋಗ್ಯವಾಗಿರಬೇಕೆಂಬ ಉದ್ದೇಶದಿಂದ ಮಾಡದೆ ಈ ಕಾನೂನು ಇಂದು ಕೇವಲ ಒಂದು ಕಾನೂನಾಗಿ ಉಳಿದಿದೆ ನಮ್ಮ ಈ ಹೋರಾಟ ಹಲವು ವರ್ಷಗಳಿಂದ ಮಾಡಿದರು ಅದರ ಫಲ ಎಂದು ನಮ್ಮ ಬಡ ಜನರಿಗೆ ಸಿಗಲಿಲ್ಲ.
ನಮ್ಮ ಈಗಿನ ಹೋರಾಟ ಉಡುಪಿಯಲ್ಲಿ ಕಾರ್ಮಿಕ ವಿಮಾ ಯೋಜನೆ ಅಡಿಯಲ್ಲಿ ಮಂಜೂರಾದ ನೂರು ಹಾಸಿಗೆಯ ಸೂಪರ್ ಆಸ್ಪತ್ರೆಯನ್ನು ಕೂಡಲೇ ಸ್ಥಾಪಿಸಿಕೊಳ್ಳುತಕ್ಕದ್ದು.
ಈ ಆಸ್ಪತ್ರೆಯಲ್ಲಿ ಸರಿಯಾದ Doctor ಗಳನ್ನು ನೇಮಕ ಮಾಡಿ ಸರಿಯಾದ ಔಷಧಿ ಉಪಚಾರವನ್ನು ಮಾಡತಕ್ಕದ್ದು.
ಉಡುಪಿಯಲ್ಲಿ ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚಿಗೆ ಕಾರ್ಮಿಕರು ತಮ್ಮ ವೇತನದಿಂದ ಹಣವನ್ನು ಕಾರ್ಮಿಕ ವಿಮಾ ಯೋಜನೆ ಅಡಿಯಲ್ಲಿ ಪಾವತಿ ಮಾಡುತ್ತಿದ್ದಾರೆ.
ಕಾರ್ಮಿಕ ವಿಮಾ ಯೋಜನೆಯಲ್ಲಿ ಪ್ರತಿ ವರ್ಷ 40% ಉಳಿತಾಯವಿದ್ದರೂ ಕೂಡ ನಮ್ಮ ಕಾರ್ಮಿಕ ವಿಮಾ ಯೋಜನೆಯ ಅಧಿಕಾರಿಗಳು ಕಾರ್ಮಿಕರ ಹಿತದೃಷ್ಟಿಯನ್ನು ಕಾಣದೆ ತಮ್ಮ ಸ್ವಾರ್ಥವನ್ನು ಕಾಪಾಡಿಕೊಳ್ಳುತ್ತಾರೆ ಇದು ನಮ್ಮ ದೇಶದಲ್ಲಿ ನಡೆಯುವ ದೊಡ್ಡ ಕ್ಯಾನ್ಸರ್ ರೋಗವಾಗಿ ಕಾಣುತ್ತದೆ.
ನಾವು ಈಗಾಗಲೇ ಸಮಾವೇಶ ಮಾಡಿದಾಗ ಉಡುಪಿ ಜಿಲ್ಲೆಯಲ್ಲಿ ಇಎಸ್‌ಐ ಡಿಸ್ಟೆನ್ಸರಿ ಇದ್ದರೂ ಕೂಡ ಅಲ್ಲಿ ಸರಿಯಾದ ಡಾಕ್ಟರ್ ಅಥವಾ ನರ್ಸುಗಳ ಇಲ್ಲದೆ ಕೇವಲ ಎರಡು ಡಾಕ್ಟರ್ಗಳಿಂದ ಕಾರ್ಕಳ ಉಡುಪಿ ಕುಂದಾಪುರ ಎಂದು ಅವರನ್ನು ಬದಲಾವಣೆ ಮಾಡುತ್ತಾ ಇರುತ್ತಾರೆ ಇದರಿಂದ ಸರಿಯಾದ ಔಷಧವನ್ನುಪಡೆಯಲು ನಮ್ಮ ನೌಕರರಿಗೆ ಹಾಗೂ ಅವರ ಕುಟುಂಬಕ್ಕೆ ತೊಂದರೆಗಳಾಗುತ್ತಿದ್ದವೆ ಈ ವಿಷಯವನ್ನು ನಮ್ಮ ಪ್ರತಿಯೊಂದು ಪತ್ರದಲ್ಲಿಯೂ ಬರೆದಿದ್ದೇವೆ ನಮ್ಮ ನೌಕರರು ಕೇವಲ ನೋಂದಣಿ ಆಸ್ಪತ್ರೆಗಳ ಸಹಾಯವನ್ನು ಪಡೆಯಬೇಕಾಗುತ್ತದೆ. ನೋಂದಣಿ ಆಸ್ಪತ್ರೆಗಳು ಕೇವಲ ಬಡ ಜನರ ಹಣವನ್ನು ಲೂಟ್ ಮಾಡೋದೇ ಉದ್ದೇಶವನ್ನು ಇಟ್ಟುಕೊಂಡು ಕೆಲಸವನ್ನು ಮಾಡುತ್ತಾರೆ ಇದಕ್ಕೆ ಮೂಲ ಕಾರಣ ನಮ್ಮ ದೇಶದ ಭ್ರಷ್ಟಾಚಾರ “ಬ್ಲಾಕ್ ಜಸ್ಟಿಸ್’ ಪದ್ಧತ್ತಿ ನಮ್ಮ ರಾಜಕೀಯ ಪಕ್ಷಗಳು ಕೇವಲ ದೊಡ್ಡ ಖಾಸಗಿ ಆಸ್ಪತ್ರೆಗಳ ಬೆಳವಣಿಗೆಗೆ ಮಾತ್ರ ಪುಯತ್ನವನ್ನು ಮಾಡುತ್ತಾರೆ.
ಕಾರ್ಮಿಕ ವಿಮಾ ಯೋಜನೆ ಅಡಿಯಲ್ಲಿ ಯಾವುದೇ ರಾಜ್ಯ ಸರ್ಕಾರವಾಗಲಿ ಕೇಂದ್ರ ಸರಕಾರ ವಾಗಲಿ, ದೇಶದ ತೆರಿಗೆಯ ಹಣವನ್ನು ಹಾಕಬೇಕಾಗಿಲ್ಲ ಇಲ್ಲಿ ಕಾರ್ಮಿಕರ ಹಣವೇ ಬೇಕಾದಷ್ಟು, ನಮ್ಮ ಕಾರ್ಮಿಕ ವೀಮಾ ಯೋಜನೆ ಆಯೋಗದೊಡನೆ ಕೊಳೆಯುತ್ತಿದೆ ಆದರೆ ಅಲ್ಲಿಯ ಅಧಿಕಾರಿಗಳು ಬಡ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಏನು ಮಾಡೋದಿಲ್ಲ ಈ ದೊಡ್ಡ ದೊಡ್ಡ ಖಾಸಗಿ ಹಾಸ್ಪಿಟಲ್ ಈ ಬಡ ಜನರ ಹಣವನ್ನು ಲೂಟಿ ಮಾಡುವುದನ್ನು ನಿಲ್ಲಿಸುವುದಕ್ಕೆ ಪ್ರಯತ್ನವನ್ನು ಮಾಡುವುದಿಲ್ಲ ನಮ್ಮ ಬೇಡಿಕೆಗಳು ಈ ಕೆಳಗಿವೆ.
ಉಡುಪಿ ಜಿಲ್ಲೆಯಲ್ಲಿ ಮಂಜೂರಾದ ನೂರು ಹಾಸಿಗೆಯ ಆಸ್ಪತ್ರೆಯನ್ನು ಕೂಡಲೇ ಪ್ರಾರಂಭಗೊಳಿಸಬೇಕು.
ಉಡುಪಿ ಜಿಲ್ಲೆಯ ಎಲ್ಲಾ ಡಿಸ್ಪೆನ್ಸರಿಗಳಲ್ಲಿ ಸರಿಯಾದ ಡಾಕ್ಟರ್ ಗಳ ಹಾಗೂ ಉಳಿದ ಕಾರ್ಮಿಕರನ್ನು ಕೂಡಲೆ ನೇಮಕಗೊಳಿಸಬೇಕು.
ಉಡುಪಿ ಡಿಸ್ಪೆನ್ಸರಿಗಳಲ್ಲಿ ಸರಿಯಾದ ಔಷಧಿಗಳು ದೊರಕುವಂತೆ ಮಾಡಬೇಕು.
ಪ್ರತಿಯೊಬ್ಬ ಕಾರ್ಮಿಕರಿಗೂ ಹಾಗೂ ಅವರ ಕುಟುಂಬಕ್ಕೆ ಔಷಧಾ ಹಾಗೂ ಟ್ರೇಟೆಂಟ್ ಗಳು ಖಾಸಗಿ ನೋಂದಣಿಯಾದ ಆಸ್ಪತ್ರೆಯಲ್ಲಿ ಸಿಗುವಂತೆ ಮಾಡಬೇಕು
“ನಮ್ಮ ಮೊದಲನೇ ಬೇಡಿಕೆ 100 ಹಾಸಿಗೆಯ ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್ ಉಡುಪಿಯಲ್ಲಿ ಮಂಜುರಾಗಿ ಇಂದಿಗೆ ಮೂರು ವರ್ಷವಾದರೂ ನಮ್ಮ ಕಾರ್ಮಿಕ ವೀಮಾ ಯೋಜನೆಯ ಅಧಿಕಾರಿಗಳು ಹಾಗೂ ಕಾರ್ಮಿಕ ಸಚಿವರು ಈ ಆಸ್ಪತ್ರೆಯ ಕೆಲಸವನ್ನ ಪ್ರಾರಂಭ ಗೊಳಿಸಲಿಲ್ಲ ಎಂದು ಸುದೀರ್ಘ ವಾಗಿ ಕಾರ್ಮಿಕರ ಪರವಾಗಿ ಮಾತನಾಡಿ ದರು, ಮಾನ್ಯ ಜಿಲ್ಲಾಧಿಕಾರಿಯವರು ಹೋರಾಟದ ಸ್ಥಳಕ್ಕೆ ಆಗಮಿಸಿ, ಮನವಿಯನ್ನ ಸ್ವೀಕರಿಸಿ ತಮ್ಮ ಮನವಿ ಯನ್ನು ಸರಕಾರ ಕ್ಕೆ ತಲುಪಿಸವ ಮತ್ತು ಈಗಾಗಲೇ ಈ ಬಗ್ಗೆ ಕಾರ್ಯ ಪ್ರಾರಂಭ ಮಾಡಿರುದಾಗಿ ಯು ಆದಷ್ಟು ಬೇಗ ಕೆಲಸ ಪೂರ್ಣ ಗೊಳಿಸುವ ಭರವಸೆ ನೀಡಿ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವಂತೆ ವಿನಂತಿಸಿದರು.
ಕಾರ್ಮಿಕ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿರುವ ಶ್ರೀಯುತ ಕುಶಲ್ ಅಮೀನ್ ಬೆಂಗ್ರೆ, ಪ್ರಧಾನ ಕಾರ್ಯದರ್ಶಿ ಅವಿನಾಶ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರೋಷನ್ ಬಂಗೇರ, ಹಿರಿಯ ಉಪಾಧ್ಯಕ್ಷರಾಗಿರುವ ಜಯರಾಮ ಪೂಜಾರಿ, ಜಿಲ್ಲಾ ಉಪಾಧ್ಯಕ್ಷರಾಗಿರುವ ಉಮೇಶ್ ಶೆಟ್ಟಿ, ಬ್ರಹ್ಮಾವರ ತಾಲೂಕು ಅಧ್ಯಕ್ಷರಾಗಿರುವ ಶ್ರೀಯುತ ಸತೀಶ್ ಪೂಜಾರಿ,ಶ್ರೀಯುತ ಸುರೇಂದ್ರ ಮಹಿಳಾ ಸದಸ್ಯರುಗಳಾದ ಶ್ರೀಮತಿ ಜ್ಯೋತಿ,ಶ್ರೀಮತಿ ಜ್ಯೋತಿ ಗಿರೀಶ್, ಶ್ರೀಮತಿ ಶ್ಯಾಮಲ, ಶ್ರೀಮತಿ ಮಮತಾ ಮುಂತಾದವರು ಭಾಗಿಯಾಗಿದ್ದರು. ವೆಲ್ವೇರ್ ಫೌಂಡೇಶನ್ ಸ್ಥಾಪಕ ಅಧ್ಯಕ್ಷರಾಗಿರುವಂತ ಶ್ರೀಯುತ ಜಿಎ ಕೋಟ್ಯರವರು, ಮಹಿಳಾ ಅಧ್ಯಕ್ಷರಾಗಿರುವ ಶ್ರೀಮತಿ ಭಾನುಮತಿಯವರು ಭಾಗಿಯಾಗಿದ್ದರು.
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾಗಿರುವ ಶ್ರೀಯುತ ಯೋಗಿಶ್ ಶೆಟ್ಟಿಯವರ ನಿರ್ದೇಶನದಂತೆ, ಜಿಲ್ಲಾಧ್ಯಕ್ಷರಾಗಿರುವ ಶ್ರೀಯುತ ಫ್ರಾಂಕಿ ಡಿಸೋಜರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.