ಫೆ.23ರಂದು ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.), ಹಾಗೂ ಪುತ್ತೂರು ಸಚ್ಚಿದಾನಂದ ಸೇವಾ ಸದನ, ವಿನಾಯಕ ನಗರ, ದರ್ಬೆ, ಪುತ್ತೂರು ಇದರ ಶತಮಾನೋತ್ಸವ, ಸಮಾರೋಪ ಸಮಾರಂಭ ಹಾಗೂ ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ (ರಿ) ಪುತ್ತೂರು ಇದರ ಕಟ್ಟಡ ಲೋಕಾರ್ಪಣೆ – ಕಹಳೆ ನ್ಯೂಸ್
![](https://www.kahalenews.com/wp-content/uploads/2025/02/Capture-1-577x450.jpg)
ಪುತ್ತೂರು : ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.), ಹಾಗೂ ಪುತ್ತೂರು ಸಚ್ಚಿದಾನಂದ ಸೇವಾ ಸದನ, ವಿನಾಯಕ ನಗರ, ದರ್ಬೆ, ಪುತ್ತೂರು ಇದರ ಶತಮಾನೋತ್ಸವ ಸಮಾರೋಪ ಸಮಾರಂಭ ಹಾಗೂ ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ (ರಿ) ಪುತ್ತೂರು ಇದರ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮವು ಫೆ.23ರಂದು ಪುತ್ತೂರಿನ ಆರ್ಯಾಪು ಗ್ರಾಮದ ಸಂಟ್ಯಾರ್ ಸರಸ್ವತಿಪುರಂನಲ್ಲಿ ನಡೆಯಲಿದೆ.
ಬ್ರಾಹ್ಮೀ ಮೂಹೂರ್ತದಲ್ಲಿ ಸಾಮೂಹಿಕ ಯೋಗ, ಧ್ಯಾನ, ಸೂರ್ಯ ನಮಸ್ಕಾರ ನಡೆದು, ಬಳಿಕ ಗಣಪತಿ ಹವನ, ಚಂಡಿಕಾ ಹವನ, ಶಿವ ಪೂಜೆ, ಶ್ರೀ ಸತ್ಯ ನಾರಾಯಣ ಪೂಜೆ ನಡೆಯಲಿದೆ. ತದನಂತರ ಶತಮಾನೋತ್ಸವ ಸಮಾರಂಭ ನಡೆಯಲಿದ್ದು, ಅತಿಥಿಗಳನ್ನು ಚೆಂಡೆವಾದನದ ಮೂಲಕ ಸ್ವಾಗತಿಸಿ, ಬಳಿಕ ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿಯ ಕಟ್ಟಡ ಲೋಕಾರ್ಪಣೆ ನಡೆಯಲಿದೆ.
ಪುರೋಹಿತರಿಂದ ಸಾಮೂಹಿಕ ಶಂಖ ಉದ್ಯೋಷದ ಮೂಲಕ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಬಳಿಕ ಪ್ರಾರ್ಥನೆ, ಸ್ವಾಗತ, ಪ್ರಾಸ್ತಾವಿಕ ನುಡಿ ಮೂಲಕ ಸಮಾರಂಭದ ಉದ್ಘಾಟನೆ ನಡೆದು, ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಶತಮಾನದ ಶತನಮನ ಬಳಿಕ ಸನ್ಮಾನ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಇನ್ನು ಮಧ್ಯಾಹ್ನ 2.00ರಿಂದ ಸಾಂಸ್ಕøತಿಕ ವೈವಿಧ್ಯ, ವಿಶ್ವವ್ಯಾಪಿ ದೇವಳ, ಸಂಘಸಂಸ್ಥೆಗಳ ಪದಾಧಿಕಾರಿಗಳ ಸಮಾವೇಶ , ಸಂಗೀತ ರಸಮಂಜರಿ ಹಾಗೂ ಯಕ್ಷಗಾನ ಬಯಲಾಟ ನಡೆಯಲಿದೆ.