Monday, March 31, 2025
ದಕ್ಷಿಣ ಕನ್ನಡಸುದ್ದಿ

ಕಾರು ಢಿಕ್ಕಿ ಹೊಡೆದು ವ್ಯಕ್ತಿ ಸಾವು-ಕಹಳೆ ನ್ಯೂಸ್

 

ಬೆಳ್ತಂಗಡಿ: ದಿಡುಪೆ ಬಳಿ ಕಾರು ಅಪಘಾತವಾಗಿ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಕ್ಕಾವು ನಿವಾಸಿ ಪುತ್ತಾಕ (ಇಬ್ರಾಹಿಂ- 67) ಎಂಬವರೆಂದು ಗುರುತಿಸಲಾಗಿದೆ. ಸಹೋದರನ ಮನೆಯ ಶುಭ ಕಾರ್ಯ ನಿಮಿತ್ತ ಮಾತುಕತೆಗಾಗಿ ಬಂಧುಗಳು ಜತೆಯಾಗಿ ದಿಡುಪೆಗೆ ಹೋಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರಿನಿಂದ ಇಳಿದು ಮುಂದಕ್ಕೆ ಚಲಿಸುತ್ತಿದ್ದಂತೆ ಹಠಾತ್ತನೆ ಕಾರು ಮುಂದಕ್ಕೆ ಚಲಿಸಿ ಈ ಅವಘಡ ಸಂಭವಿಸಿದೆ. ಹಕೀಂ ವಾಹನ ಚಲಾಯಿಸುತ್ತಿದ್ದರೆಂದು ತಿಳಿದು ಬಂದಿದ್ದು ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಪುತ್ತಾಕ ಅವರನ್ನು ತತ್‌ಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು. ಮೃತರು ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ