![](https://www.kahalenews.com/wp-content/uploads/2025/02/99cb56d244ccca9a3a67498b139362a1981885cdcaa7eabb0f877755e7cf6dfc.jpg)
ವಾಷಿಂಗ್ಟನ್: ಪಶ್ಚಿಮ ಅಲಾಸ್ಕಾದಿಂದ ನಾಪತ್ತೆಯಾಗಿದ್ದ ಬೇರಿಂಗ್ ಏರ್ ಪ್ರಯಾಣಿಕ ವಿಮಾನವೊಂದು ಮಂಜುಗಡ್ಡೆಯ ಮೇಲೆ ಪತನಗೊಂಡಿದ್ದು ವಿಮಾನದಲ್ಲಿದ್ದ ಎಲ್ಲಾ ಹತ್ತು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಗುರುವಾರ ಸಂಜೆ ಅಲಾಸ್ಕಾ ನಗರದ ಯುನಾಕ್ಲೀಟ್ ನಿಂದ ಹೊರಟಿದ್ದ ಬೇರಿಂಗ್ ಏರ್ ಫ್ಲೈಟ್, ಟೇಕ್ ಆಫ್ ಆದ 39 ನಿಮಿಷಗಳಲ್ಲೆ ರಾಡಾರ್ ಸಂಪರ್ಕಕ್ಕೆ ಸಿಗದೆ ಕಣ್ಮರೆಯಾಗಿತ್ತು.
208B ಗ್ರ್ಯಾಂಡ್ ಕ್ಯಾರಾವಾನ್ ವಿಮಾನದಲ್ಲಿ ಪೈಲಟ್ ಸೇರಿದಂತೆ ಹತ್ತು ಜನರು ಪ್ರಯಾಣಿಸುತ್ತಿದ್ದರು. ವಿಮಾನ ಕಣ್ಮರೆಯಾದ ಹಿನ್ನೆಲೆಯಲ್ಲಿ ಯುಎಸ್ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಕಾರ್ಯಾಚರಣೆ ಆರಂಭಿಸಿತ್ತು ಇದಾದ ಬಳಿಕ ಶುಕ್ರವಾರ ಬೆಳಿಗ್ಗೆ ರಕ್ಷಣಾ ತಂಡವು ಸಮುದ್ರದ ಬಳಿಯ ಮಂಜುಗಡ್ಡೆಯ ಮೇಲೆ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್ ವಕ್ತಾರ ಮೈಕ್ ಸಲೆರ್ನೊ ಮಾಹಿತಿ ನೀಡಿದ್ದಾರೆ.