ರೋಟರಿ ಕ್ಲಬ್ ಬಂಟ್ವಾಳ ವತಿಯಿಂದ ನರಿಕೊಂಬು ಸರಕಾರ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಮೇಲ್ಚಾವಣಿ ರಚನಾ ಕಾರ್ಯಕ್ರಮಕ್ಕೆ ಚಾಲನೆ-ಕಹಳೆ ನ್ಯೂಸ್
![](https://www.kahalenews.com/wp-content/uploads/2025/02/WhatsApp-Image-2025-02-09-at-12.55.42-PM-750x450.jpeg)
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ವತಿಯಿಂದ ಬಂಟ್ವಾಳ ತಾಲೂಕಿನ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಕ್ಕೆ 2.50 ಲಕ್ಷ ವೆಚ್ಚದಲ್ಲಿ ಮೇಲ್ಚಾವಣಿ ಶೀಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಬೇಬಿ ಕುಂದರ್ ತೆಂಗಿನಕಾಯಿ ಒಡೆದು ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ರೋಟರಿ ಗವರ್ನರ್ ಪ್ರಕಾಶ್ ಕಾರಂತ್, ರೋಟೋರಿಯನ್ ರಾಜೇಶ್ ಸುವರ್ಣ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಅಂಚನ್, ಉಪಾಧ್ಯಕ್ಷೆ ಉಷಾಲಾಕ್ಷಿ, ಸದಸ್ಯರುಗಳಾದ ದಾಮೋದರ್, ಜಯಪ್ರಕಾಶ್, ಪ್ರಸಾದ್, ಪೂವಪ್ಪ, ಕೇಶವ, ಚಿತ್ರ, ಶಶಿ, ಶಾಲಾ ಶಿಕ್ಷಕರಾದ ಹಿರಣ್ಮಯಿ, ವಿಲ್ಮಾ ಪ್ರಸಿಲ್ಲ ಪಿಂಟೋ, ದಿವ್ಯಶ್ರೀ, ಅನಿತಾ ಲಸ್ರದೋ, ದಿವ್ಯಶ್ರೀ, ಮಮತಾ, ಹರಿಣಾಕ್ಷಿ, ಪೂಜಾ ಜಯಲಕ್ಷ್ಮಿ, ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ ಸ್ವಾಗತಿಸಿ ,ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ ವಂದಿಸಿದರು.