![](https://www.kahalenews.com/wp-content/uploads/2025/02/IMG-20250203-WA0014-750x450.jpg)
ಪುತ್ತೂರು: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶೈಕ್ಷಣಿಕ ಕ್ಷೇತ್ರಗಳು ಮಹತ್ತರ ಪಾತ್ರ ವಹಿಸುತ್ತದೆ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅವಕಾಶಗಳನ್ನು ಕಲ್ಪಿಸುವ ವೇದಿಕೆಗಳಾಗಿರುತ್ತದೆ. ಶಿಕ್ಷಣ ಎನ್ನುವುದು ಕ್ಷಣ ಕ್ಷಣದ ಶಿಕ್ಷಣವಾಗಬೇಕು, ಕಲಿಕೆ ಎಂದರೆ ಓದುವುದು ಮಾತ್ರವಲ್ಲದೆ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪೋಷಕರು ಮಾರ್ಗದರ್ಶನ ನೀಡಬೇಕು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಡಾ. ಕೃಷ್ಣ ಪ್ರಸನ್ನ ಹೇಳಿದರು.
ಇವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದಡಿಯಲ್ಲಿ ಕರ‍್ಯನಿರ್ವಹಿಸುತ್ತಿರುವ ನಿವೇದಿತಾ ಶಿಶುಮಂದಿರದ ಪುಟಾಣಿ ಪ್ರಪಂಚ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.
ಈ ಸಂರ್ಭದಲ್ಲಿ ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ಮಾತನಾಡಿ, ಶಿಶು ಮಂದಿರದ ಶಿಕ್ಷಣ ಬಾಲ್ಯದಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದೆ. ಜೊತೆ ಜೊತೆಗೆ ರಾಷ್ಟ್ರೀಯ ಚಿಂತನೆ, ದೇಶದ ಸಂಸ್ಕೃತಿ ಆಚಾರ- ವಿಚಾರಗಳನ್ನು ತಿಳಿಸುತ್ತದೆ. ಮಕ್ಕಳು ಹೇಳುವುದನ್ನು ಕೇಳುವುದಿಲ್ಲ ಬದಲಾಗಿ ದೊಡ್ಡವರನ್ನು ನೋಡಿ ಕಲಿಯುತ್ತಾರೆ. ಆದ್ದರಿಂದ ಮಕ್ಕಳಿಗೆ ಪೋಷಕರು ಕೂಡಾ ಮಾದರಿಗಳಾಗಬೇಕು ಎಂದರು.
ವೇದಿಕೆಯಲ್ಲಿ ನಿವೇದಿತಾ ಶಿಶು ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷೆ ಲಕ್ಷ್ಮೀ ವಿ.ಜಿ ಭಟ್, ಶಿಶು ಮಂದಿರದ ಮಾತಾಜಿ ಜ್ಯೋತಿ
ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರದಲ್ಲಿ ವಿದ್ಯಾರ್ಥಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಪೋಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ
ನಡೆಯಿತು.
ನಿವೇದಿತಾ ಶಿಶು ಮಂದಿರದ ವಿದ್ಯಾರ್ಥಿ ವೇದಾಂತ್ ವಸಿಷ್ಠ ಸ್ವಾಗತಿಸಿ, ಆಡಳಿತ ಮಂಡಳಿಯ ಕಾರ್ಯದರ್ಶಿ ರಾಧಾಕೃಷ್ಣ ವಂದಿಸಿದರು.
ಪೋಷಕರಾದ ವೈಶಾಖಿ, ಹವ್ಯಶ್ರೀ, ಧರ್ಮಶ್ರೀ ಕಾರ್ಯಕ್ರಮವನ್ನು ನಿರ್ವಹಿಸಿದರು.