![](https://www.kahalenews.com/wp-content/uploads/2025/02/download-1-1.jpg)
ಬೆಳ್ತಂಗಡಿ: ಸಾಕಷ್ಟು ಸುದ್ದಿ ಮಾಡಿರುವ ಬೆಳ್ತಂಗಡಿ ತಾಲೂಕಿನ ಮಾಲಾಡಿ ಮನೆಯಲ್ಲಿನ ಭೂತದ ಕಾಟ ನಿಂತು ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿ ಭೂತದ ಕಾಟದಿಂದ ಮನೆಯವರು ನಿದ್ದೆ ಕಳೆದುಕೊಂಡಿದ್ದರು. ಮನೆಯಲ್ಲಿ ಬಟ್ಟೆಗಳಿಗೆ ಬೆಂಕಿ ಬೀಳುವುದು, ಪಾತ್ರಗಳ ಉರುಳಿ ಬೀಳುವುದು ಹಾಗೂ ಮನೆಯಲ್ಲಿ ಯಾರೋ ಅಡ್ಡಾಡಿದಂತ ಅನುಭವದಿಂದ ಮನೆಯವರು ಭಯಭೀತರಾಗಿದ್ದರು.
ಸುದ್ದಿ ತಿಳಿದು ಈ ಮನೆಗೆ ಅನೇಕ ಮಂದಿ ಭೇಟಿ ನೀಡುತ್ತಿದ್ದ ಕಾರಣದಿಂದ ಎರಡು ದಿನಗಳ ಹಿಂದೆ ಇಡೀ ಕುಟುಂಬ ಮನೆ ಬಿಟ್ಟು ಸಂಬಂಧಿಕರ ಮನೆಗೆ ತೆರಳಿದ್ದರು. ಫೆ.8ರಂದು ಶನಿವಾರ ಮತ್ತೆ ಮನೆಗೆ ಆಗಮಿಸಿದ್ದು, ಮನೆಯಲ್ಲಿ ಪರಿಹಾರ ಕಾರ್ಯಗಳನ್ನು ಮಾಡಿದ್ದಾಗಿ ಮಾಹಿತಿ ಇದೆ. ಇದು ಕುಟುಂಬ ದೈವದ ತೊಂದರೆಯಿಂದ ಆಗಿದ್ದ ಸಮಸ್ಯೆ ಎಂಬ ಮಾಹಿತಿ ಲಭ್ಯವಾಗಿದ್ದು, ಮನೆಯಲ್ಲಿ ಕಳೆದು ಹೋಗಿದ್ದ ಚಿನ್ನ ಕೂಡಾ ಸಿಕ್ಕಿದೆ.
ಮನೆಯಲ್ಲಿನ ದೇವರ ಫೋಟೋದ ಹಿಂಭಾಗದಲ್ಲಿ ಚಿನ್ನಾಭರಣ ಪತ್ತೆಯಾಗಿದ್ದು, ಈ ಹಿಂದೆ ಭೂತವೇ ಚಿನ್ನವನ್ನು ಅಡಗಿಸಿಟ್ಟಿದೆ ಎನ್ನಲಾಗಿತ್ತು. ಭಾನುವಾರ ಈ ಮನೆಗೆ ಪವಾಡ ರಹಸ್ಯ ತಜ್ಞ ಹುಲಿಕಲ್ ನಟರಾಜ್ ಅವರು ಬರುವುದಾಗಿ ಹೇಳಿದ್ದು ಅವರಿಗೆ ಎಲ್ಲಾ ಸಮಸ್ಯೆ ಪರಿಹಾರ ಆಗಿದೆ ಎಂಬ ಮಾಹಿತಿಯನ್ನು ಉಮೇಶ್ ಶೆಟ್ಟಿ ಕುಟುಂಬದವರು ನೀಡಿದ್ದಾರೆ.