ಬೆಟ್ಟಂಪಾಡಿ ಚೆಂಡೆವಾದಕ ರಾಮಯ್ಯ ಶೆಟ್ಟಿ ಮತ್ತು ಅಳಿಯ ಜನಾರ್ದನ ಶೆಟ್ಟಿಗೆ ಕಾರು ಡಿಕ್ಕಿ ಹೊಡೆದು ಮೃತ್ಯು-ಕಹಳೆ ನ್ಯೂಸ್
![](https://www.kahalenews.com/wp-content/uploads/2025/02/wmremove-transformed-1.jpeg)
ಪುತ್ತೂರು: ಕನಕಮಜಲು ಗ್ರಾಮದ ಕೋಡಿ ತಿರುವಿನಲ್ಲಿ ಇಬ್ಬರು ಪಾದಚಾರಿಗಳಿಗೆ ಕಾರೊಂದು ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೃತರು ಬೆಟ್ಟಂಪಾಡಿಯ ರಾಮಯ್ಯ ಶೆಟ್ಟಿ (67 ವ) ಹಾಗೂ ಕನಕಮಜಲಿನ ಜನಾರ್ದನ ಶೆಟ್ಟಿ (50 ವ) ಎಂದು ತಿಳಿದುಬಂದಿದೆ.
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯ, ಚೆಂಡೆವಾದಕ ರಾಮಯ್ಯ ಶೆಟ್ಟಿ ಕಕ್ಕೂರು ಹಾಗೂ ಅವರ ಅಳಿಯ ಜನಾರ್ದನ ಶೆಟ್ಟಿ ಮೃತ್ಯುಗೀಡಾದವರು.
ಮೃತ ರಾಮಯ್ಯ ಶೆಟ್ಟಿಯವರು ಬೆಟ್ಟಂಪಾಡಿ ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಗೌರವ ಸಲಹೆಗಾರರಾಗಿದ್ದರು. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರಾಗಿದ್ದು, ಹವ್ಯಾಸಿ ಚೆಂಡೆವಾದಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ, ಊರವರಿಂದ ‘ಚೆಂಡೆ ರಾಮಯ್ಯಣ್ಣ’ ಎಂದೇ ಕರೆಯಲ್ಪಡುತ್ತಿದ್ದರು.
ಮೃತ ರಾಮಯ್ಯ ಶೆಟ್ಟಿಯವರು ಪತ್ನಿ ಮೀನಾಕ್ಷಿ, ಪುತ್ರ ಲಕ್ಷ್ಮೀಶ, ಪುತ್ರಿಯರಾದ ಹೇಮಾವತಿ, ಪುಷ್ಪಾವತಿಯವರನ್ನು ಅಗಲಿದ್ದಾರೆ.