
ಸಹೋದರಿಯ ಮದುವೆ ಸಮಾರಂಭದ ವೇಳೆ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದ ಯುವತಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಸಂಭವಿಸಿದೆ.
ಮೃತ ಯುವತಿಯನ್ನು ಇಂದೋರ್ ಮೂಲದ ಪರಿಣಿತ (23) ಎನ್ನಲಾಗಿದ್ದು, ಯುವತಿಯ ಕೊನೆಯ ಕ್ಷಣದ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಘಟನೆ ಶನಿವಾರ(ಫೆ.8) ರಂದು ಸಂಭವಿಸಿದ್ದು, ಪರಿಣಿತ ತನ್ನ ಸಹೋದರಿಯ ಮದುವೆಯ ಸಂಭ್ರಮದಲ್ಲಿದ್ದಳು ಅಲ್ಲದೆ ಶನಿವಾರ ರಾತ್ರಿ ಸುಮಾರು ಒಂಬತ್ತು ಗಂಟೆಯ ಮದುವೆಯ ಹಳದಿ ಶಾಸ್ತ್ರ ನಡೆಯುತ್ತಿತ್ತು ಹಾಗಾಗಿ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನಡೆಯುತಿತ್ತು ಈ ವೇಳೆ ಪರಿಣಿತಿ ವೇದಿಕೆ ವೇಳೆ ಡಾನ್ಸ್ ಮಾಡಲು ತೆರಳಿದ್ದಾಳೆ ಈ ವೇಳೆ ನೃತ್ಯ ಮಾಡುತ್ತಲೇ ಯುವತಿ ಹೃದಯಾಘಾತಕ್ಕೆ ಒಳಗಾಗಿ ವೇದಿಕೆಯಲ್ಲೇ ಕುಸಿದುಬಿದ್ದಿದ್ದಾಳೆ ಕೂಡಲೇ ಆಕೆಯನ್ನು ಕುಟುಂಬ ಸದಸ್ಯರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಪರಿಶೀಲಿಸಿದ ವೈದ್ಯರು ಯುವತಿ ಮೃತಪಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ.