Friday, September 20, 2024
ಸುದ್ದಿ

ಡೊನಾಲ್ಡ್ ಟ್ರಂಪ್‍ನಿಂದ ದೀಪಾವಳಿ ಆಚರಣೆ – ಕಹಳೆ ನ್ಯೂಸ್

ಅಮೆರಿಕ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಆಯೋಜಿಸಿದ್ದ ದೀಪಾವಳಿ ಸಂಭ್ರಮದಲ್ಲಿ ಭಾಗವಹಿಸಿ ದೀಪ ಬೆಳಗುವ ಮೂಲಕ ಅಚ್ಚರಿ ಮೂಡಿಸಿದರು. ಟ್ರಂಪ್ ಆಡಳಿತದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಮೂಲದ ಅಮೆರಿಕನ್ನರನ್ನು ಒಳಗೊಂಡ ಈ ಸಮಾರಂಭದಲ್ಲಿ ಟ್ರಂಪ್ ದಿಢೀರನೇ ಪ್ರತ್ಯಕ್ಷರಾದರು.“ಭಾರತ ಹಾಗೂ ಅಮೆರಿನ ನಡುವಿನ ಸಂಬಂಧ ಹಿಂದೆಂದಿಗಿಂತಲೂ ಉತ್ತಮವಾಗಿದೆ. ಬಹುಶಃ ಹಿಂದೆಂದಿಗಿಂತಲೂ ನಿಕಟ ಎಂಬ ಭಾರತೀಯ ರಾಯಭಾರಿ ನವತೇಜ್ ಸರ್ನಾ ಅವರ ಮಾತನ್ನು ನಾನು ಒಪ್ಪುತ್ತೇನೆ” ಎಂದು ಟ್ರಂಪ್ ಬಣ್ಣಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಫೆಡರಲ್ ಕಮ್ಯುನಿಕೇಶನ್ಸ್ ಕಮಿಷನ್ ಅಧ್ಯಕ್ಷ ಅಜಿತ್ ಪೈ, ಡ್ರಗ್ ಎನ್‍ಫೋರ್ಸ್‍ಮೆಂಟ್ ಏಜೆನ್ಸಿ ಆಡಳಿತಾಧಿಕಾರಿ ಉತ್ತಮ್ ಧಿಲ್ಲಾನ್, ಸೆಂಟರ್ ಫಾರ್ ಮೆಡಿಕೇರ್ ಆಯಂಡ್ ಮೆಡಿಕೇಟೆಡ್ ಸರ್ವೀಸಸ್‍ನ ಆಡಳಿತಾಧಿಕಾರಿ ಸೀಮಾ ವರ್ಮಾ ಮತ್ತು ಟ್ರಂಪ್ ಆಡಳಿತದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಮೂಲದ ಇತರ ಅಧಿಕಾರಿಗಳು ಈ ಚುಟುಕು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಾಹೀರಾತು