ವಿವೇಕಾನಂದ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳ ಅಗ್ರಮಾನ್ಯ ಸಾಧನೆ ;ದೆಹಲಿಯ ಆರ್‌ಡಿಸಿ ಪರೇಡ್ ನಲ್ಲಿ ಭಾಗವಹಿದ ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ -ಕಹಳೆ ನ್ಯೂಸ್
![](https://www.kahalenews.com/wp-content/uploads/2025/02/IMG_20250210_133025-750x450.jpg)
ಪುತ್ತೂರು : ಇಂದು ನಮ್ಮ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ನಮ್ಮ ಕಾಲೇಜಿನ ಹೆಸರನ್ನು ದೇಶದಾದ್ಯಂತ ಪಸರಿಸಿದ್ದಾರೆ. ಬದುಕಿನ ಈ ಹಂತದಲ್ಲಿ ಆರ್‌ಡಿಸಿ ಪರೇಡ್ ನಲ್ಲಿ ಭಾಗವಹಿಸಿ ಮಹತ್ತರ ಸಾಧನೆಯನ್ನು ಮಾಡಿದ್ದಾರೆ. ಇವರ ಸಾಧನೆ ಮತ್ತಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ಇಲ್ಲಿ ಎನ್‌ಸಿಸಿ ಘಟಕ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ ಕಾಲೇಜಿನ ಎನ್‌ಸಿಸಿ ಘಟಕದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ. ಎನ್ ಮಾತನಾಡಿ ನಮ್ಮ ಕಾಲೇಜಿನ ಎನ್‌ಸಿಸಿ ಘಟಕ ಇದುವರೆಗೆ ಹಲವಾರು ವಿಶೇಷ ಸಾಧನೆಯನ್ನು ಮಾಡಿ ಅಪಾರ ಗೌರವವನ್ನು ಗಳಿಸಿದೆ. ಎನ್‌ಸಿಸಿ ಘಟಕದ ಈ ಮೂವರು ವಿದ್ಯಾರ್ಥಿಗಳ ಸಾಧನೆ ವಿಶೇಷವಾದದ್ದು. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸುವಂತಾಗಲು ಮನೆಯಲ್ಲಿಯೂ ಒಂದೊಳ್ಳೆಯ ವಾತಾವರಣ ಸೃಷ್ಟಿಯಾಗಬೇಕು ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿಶೇಷ ಸಾಧನೆ ಮಾಡಿದ ಎನ್‌ಸಿಸಿ ಘಟಕದ ವಿದ್ಯಾರ್ಥಿಗಳಾದ ಜೆಯುಒ ಸುಜಿತ್, ಜೆಯುಒ ಲಹರಿ, ಜೆಯುಒ ಶುಭದ ಆರ್ ಪ್ರಕಾಶ್ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು. ಈ ಸಂದರ್ಭದಲ್ಲಿ ಪೋಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಎನ್‌ಸಿಸಿ ಕೆಡಿಟ್‌ಗಳನ್ನು
ವಿಶೇಷ ಚಂಡೆ ವಾದನದ ಮೂಲಕ ಪುತ್ತೂರಿನ ಕೋಟಿ ಚೆನ್ನಯ ಬಸ್ ನಿಲ್ದಾಣದಿಂದ ಮೆರವಣಿಗೆಯೊಂದಿಗೆ ಕಾಲೇಜಿಗೆ ಕರೆತರಲಾಯಿತು.
ಕಾರ್ಯಕ್ರಮದಲ್ಲಿ ಎನ್. ಸಿ. ಸಿ ಘಟಕದ ಅಧಿಕಾರಿ ಭಾಮಿ. ಲೆ. ಅತುಲ್ ಶೆಣೈ, ಉಪಪ್ರಾಂಶುಪಾಲ ಪ್ರೊ.ಶಿವಪ್ರಸಾದ್ ಕೆ ಎಸ್, ಕಾಲೇಜಿನ ವಿಶೇಷ ಅಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ಐಕ್ಯೂಎಸಿ ಸಂಯೋಜಕಿ ಡಾ.ರವಿಕಲಾ ಮತ್ತು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ
ಹೆತ್ತವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಶ್ರೀಜೇಶ್ ಸ್ವಾಗತಿಸಿ, ದ್ವಿತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯರಾದ ದೀಕ್ಷಾ ಯು ಜಿ ವಂದಿಸಿ, ನಿಭಾ ಡಿ ನಿರ್ವಹಿಸಿದರು.