ಮಂಗಳೂರು: ಬರ್ಕೆ ಮತ್ತು ಬಂದರು ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಮಣ್ಣಗುಡ್ಡೆ ದುರ್ಗಾಮಹಲ್ ಜಂಕ್ಷನ್ ಬಳಿ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ ಕೊಟ್ಟಾಯಂ ಜಿಲ್ಲೆ ಕರುಕಚಲ್ ತೊಪ್ಪಿಲ್ ಕೈಲಾತ್ ಕುಟ್ಟಪ್ಪಳ್ಳಿ ಮೂಲದ ಪ್ರಸ್ತುತ ಕಾಪ್ರಿಗುಡ್ಡದಲ್ಲಿ ವಾಸವಾಗಿರುವ ಸೋನು ಸಾಜಿ(19)ಯನ್ನು ಬರ್ಕೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆತನ ವಿಚಾರಣೆ ವೇಳೆ ಬಾಯಿಯಿಂದ ಗಾಂಜಾ ಸೇವನೆ ವಾಸನೆ ಬಂದಿದ್ದು, ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ದೃಢಪಟ್ಟಿದೆ. ಮಾದಕ ದ್ರವ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬಾವುಟಗುಡ್ಡೆ ಬಳಿ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ ಕೊಯಿಕ್ಕೋಡ್ ಪೊಟ್ಟಮಲ್ ಕುತ್ತಿರವಟ್ಟಂ ನಿವಾಸಿ ಜಗನ್‌ಜಿತ್ ಕೆ.ಎಸ್.(21)ನನ್ನು ಬಂದರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿದ್ದಾನೆ. ವೈದ್ಯಕೀಯ ತಪಾಸಣೆಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ಆತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.