ಪಾಂಗಾಳ ಆರ್ಯಡಿ ಶ್ರೀ ಆದಿ ಜನಾರ್ಧನ ದೇವರ ಸನ್ನಿಧಿಯ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶದ ಪೂರ್ವ ತಯಾರಿ ಸಭೆ-ಕಹಳೆ ನ್ಯೂಸ್
ಉಡುಪಿ:ಮಧ್ವ ಪೂಜಿತ, ರಾಜವಂದಿತ ಎಲ್ಲರ ಒಡೆಯ ಪಾಂಗಾಳ ಆರ್ಯಡಿ ಶ್ರೀ ಆದಿ ಜನಾರ್ಧನ ದೇವರ ಸನ್ನಿಧಿಯ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶದ ಪೂರ್ವ ತಯಾರಿ ಸಭೆಯನ್ನು ಕಾಪು ಕ್ಷೇತ್ರದ ಮಾನ್ಯ ಶಾಸಕರಾದ ಗುರ್ಮೇ ಸುರೇಶ್ ಶೆಟ್ಟಿ ಯವರು ನಡೆಸಿ ಕೊಟ್ಟರು.
ತುಳುನಡಿನ ಜನರ ಬಕ್ತಿ ಬಾವನೆಗಳೇ ಇಷ್ಟೊಂದು ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಕಾರಣ. ಇಲ್ಲಿಯ ಕಲ್ಲು ಮಣ್ಣು ಮರಗಳನ್ನು ದೈವತ್ವದಿಂದ ಪೂಜಿಸುವ ಮನಸ್ಸುಗಳನ್ನು ನಮ್ಮ ಹಿರಿಯರು ನಿರ್ಮಾಣ ಮಾಡಿದ್ದಾರೆ. ನಾನು ಚಿಕ್ಕದಿರುವಾಗ ನಾವು ಬಡತನದ ಗುಡಿಸಿನಲ್ಲಿ ಕೃಷಿ ಅವಲಂಬಿಸಿ ಬದುಕುತ್ತಿದ್ದರು , ನನ್ನ ಮಾತೃಶಿಯವರು ಬೆಳಗ್ಗಿನ ಜಾವ ಬೇಗ ಎದ್ದು ಭಕ್ತಿ ಬಾವ ಶೃದ್ಧೆಯಿಂದ ದೇವರನ್ನು ಪೂಜಿಸುತ್ತಿದ್ದುದನ್ನು ನೋಡುತ್ತಿದ್ದೆ, ಭಕ್ತಿಯಿಂದ ಸುಸಂಸ್ಕೃತದಿಂದ ಇನ್ನೊಬ್ಬರನ್ನು ಗೌರವಿಸುವ ಮೋಸ ಮಾಡದ ಸುಳ್ಳು ಹೇಳದೆ ಬದುಕ ಬೇಕು ಭಗವಂತನಲ್ಲಿ ವಿಶ್ವಾಸದಿಂದ ನಂಬಿ ನಡೆಯುವ ಪಾಠ ನನ್ನ ಮಾತೃಶ್ರೀ ಯವರಿಂದ ಕಲಿತೆ , ಊರಿನಲ್ಲಿ ದೇವತ ಕಾರ್ಯದ ದಿನ ನಿಗಧಿಯಾದಾಗ ಊರಲ್ಲಿ ಸಂಭ್ರಮ ಆಚರಣೆ. ಮನೆಯ ಅಂಗಳ ದಲ್ಲಿ ಸೆಗಣಿ ಸಾರಿಸಿ, ರಂಗವಲ್ಲಿ ಹಾಕಿ ಫಲಹಾರ ಸೇವಿಸಿ ಎಲ್ಲರೂ ಒಂದು ಗೂಡಿ ಶ್ರದ್ದೆ ಯಿಂದ ದೇವಸ್ಥಾನದ ಎಲ್ಲಾ ಸೇವಾ ಕಾರ್ಯಗಳಲ್ಲಿ ಬಾಗವಹಿಸುತ್ತಿದ್ದರು. ಜಾತಿ ಮತ ಬೇದವಿಲ್ಲದೆ ದೇವತಾ ಕಾರ್ಯ ಮಾಡುತ್ತಿದ್ದರು. ಮಾನವನ ಬದುಕು ಭಕ್ತಿಯ ನೆಲೆಯಲ್ಲಿ ನಿಂತಿರುವುದು. ಪ್ರತಿ ಬಾರಿಯು ಇಂತಹ ದೈವತಾ ಕಾರ್ಯ ಒದಗಿ ಬಂದಾಗ ಲೇ ಮನುಷ್ಯನಿಗೆ ಭಕ್ತಿ ಶೃದ್ದೆಗೆ ಸ್ಫೂರ್ತಿ ದೊರೆತು ದೇವರ ಕೃಪೆಗೆ ಪಾತ್ರ ನಾಗುತ್ತಾನೆ. ನಮ್ಮ ಇಷ್ಟಾರ್ತಗಳನ್ನು ದೇವರು ನಡೆಸಿಕೊಡುತ್ತಾರೆ ಎಂಬ ವಿಶ್ವಾಸದ ನುಡಿಗಳನ್ನು ಆಡಿದರು.
ಅತ್ಯಂತ ಪೂರತನ ಚಾರಿತ್ರಿಕ ಇತಿಹಾಸ ಇರುವ ಪಾಂಗಾಳ ಆರ್ಯಡಿ ಶ್ರೀ ಜನಾರ್ಧನ ಸನ್ನಿದಿಯಲ್ಲಿ ಅನೇಕ ಭಕ್ತಾದಿಗಳ ಇಷ್ಟಾರ್ತ ನೆರವೇರಿದ ಪ್ರಚೀತಿ ಇದೆ. ಆರೋಗ್ಯ ಸಮಸ್ಯೆಯಿರುವಾಗ, ಕಂಕಣ ಕೂಡಿ ಬರದಾಗ, ಸಂತತಿ ಪಡೆಯದಿದ್ದಾಗ ಸಾವಿರಾರು ಭಕ್ತರು ತಮ್ಮ ನೀವೆದನೆಯನ್ನು ಜನಾರ್ದನ ಚರಣದಲ್ಲಿ ಇಟ್ಟು ಪೂಜೆ ಸಲ್ಲಿಸಿ ಕೆಲವೇ ದಿನಗಳಲ್ಲಿ ತಮ್ಮ ಇಷ್ಟಾರ್ಥ ಪೂರೈಸಿ ಕೊಂಡಿದ್ದಾರೆ
ನನ್ನ ಮಾತೃಶಿಯವರು ನನ್ನ ಮಗನಿಗೆ ಒಂದು ಒಳ್ಳೆಯ ವದು ದೊರೆಯಲಿ ಎಂದು ಶ್ರೀ ಜನಾರ್ದನನಲ್ಲಿ ಬೇಡಿ ಕೊಂಡಿದ್ದಕ್ಕೆ ನನಗೆ ಇದೇ ಪಾಂಗಾಳ ಆರ್ಯಡಿ ಊರಿನ ಶ್ರೀಮತಿ ದೊರತಿದ್ದಾಳೆ. ನನ್ನ ಮಾತೃಶ್ರೀಯವರು ಯಾವಾಗಲು ನೆನಪಿಸಿ ದೇವರಲ್ಲಿ ನಂಬಿಕೆ ಇಡು, ಎಲ್ಲಾ ಕಾರ್ಯ ಅವರು ಮಾಡಿಕೊಡುತ್ತಾರೆ ಎಂದು ಹೇಳುತ್ತಿದ್ದ ಮಾತು ನೆನಪಾಗುತ್ತದೆ.
ಆಧುನಿಕತೆಯ ಹೆಸರಲ್ಲಿ ಭಕ್ತಿ ಬಾವನೆಗಳು ಬದಲಾಗಿ ನಮ್ಮ ಹಿರಿಯರು ಅನಾಥ ಆಶ್ರಮ ಸೇರುತ್ತಿದ್ದಾರೆ. ಆಸ್ತಿಗಾಗಿ ಸಂಬಂಧಗಳು ಮರಿದು ಹೊಗುತ್ತಿವೆ. ಒಗ್ಗಟ್ಟಿನಲ್ಲಿ ಸ್ಪಂದಿಸಿ ಬದುಕಬೇಕಾದ ನಾವು ನಾವೇ ಬಿರುಕುಗಳನ್ನು ಮಾಡುತ್ತಿದ್ದೇವೆ. ಆದ್ದರಿಂದ ಎಲ್ಲರೂ ಕೈ ಜೋಡಿಸಿ ತನು ಮನ ಧನದಿಂದ ಸಹಕರಿಸಿ. ಪಾಂಗಳ ಆರ್ಯಡಿ ಶ್ರೀ ಜನಾರ್ಧನನ ಸೇವೆ ಮಾಡೋಣ ನಾನು ನಿಮ್ಮ ಜೊತೆ ಸದಾ ಇರುತ್ತೇನೆ ಎಂದರು.
ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷರಾದ ಉದ್ಯಮಿ ಗೋವಿಂದ ಶೆಟ್ಟಿಯವರು. ಹಿರಿಯರ ಮಾರ್ಗದರ್ಶನದಿಂದ ಯುವ ಶಕ್ತಿಗಳನ್ನು ಒಟ್ಟುಗೂಡಿಸಿ ಎಲ್ಲರೂ ಒಂದಾಗಿ ಸೇವೆ ಮಾಡೋಣ ಎಂದರು ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.