Tuesday, February 11, 2025
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಫೆ 13 ರಿಂದ ಫೆ 17 ರ ವರೆಗೆ ಮೆಗಿನಪೇಟೆ ಜೈನ ಬಸದಿಯಲ್ಲಿ ನಡೆಯುವ ಕಾರ್ಯ ಕ್ರಮದ ಪೂರ್ವ ತಯಾರಿ – ಕಹಳೆ ನ್ಯೂಸ್

ವಿಟ್ಲ : ಭ/ಶ್ರೀ1008 ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭ/1008 ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಹಾಗೂ ಶ್ರೀ ಯಕ್ಷಿ ಪದ್ಮಾವತಿ ಅಮ್ಮನವರ ಮತ್ತು ಶ್ರೀ ಯಕ್ಷಿ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮಕ್ಕೆ ಪೂರಕವಾಗಿ ಭಗವಾನ್ ಚಂದ್ರನಾಥಸ್ವಾಮಿ ನೂತನ ಬಿಂಬವನ್ನು ಆರ್ಕುಳ ದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕಿನ ಸದಸ್ಯರ ನೊಳಗೊಂಡು ಫೆ 13 ರಿಂದ ಫೆ 17 ರ ವರೆಗೆ ಮೆಗಿನಪೇಟೆ ಜೈನ ಬಸದಿಯಲ್ಲಿ ನಡೆಯುವ ಕಾರ್ಯ ಕ್ರಮದ ಪೂರ್ವ ತಯಾರಿ ನಡೆಯಿತು. ಈ ಕಾರ್ಯಗಳಲ್ಲಿ ಕೆದಿಲ ,ವಿಟ್ಲ ಶೌರ್ಯ ತಂಡ ದ ಸದಸ್ಯರು ಬಾಗವಹಿಸಿದರು.

ಈ ಕಾರ್ಯ ಕ್ರಮದಲ್ಲಿ ಮುಖ್ಯಸ್ಥರಾದ ಪುಷ್ಪರಾಜ್ ಜೈನ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೆ ಗೌಡ ,ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್,ಯೋಜನಾಧಿಕಾರಿ ರಮೇಶ್ ಕೃಷಿ ಅಧಿಕಾರಿ ಚಿದಾನಂದ ಹಾಗು ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೆದಿಲದ ಸದಸ್ಯರಾದ ಜಗದೀಶ, ಶೀನಪ್ಪವೆಂಕಪ್ಪ ಗಿರೀಶ ಹಾಗೂ ಪೆರ್ಲಾಪು ತಾರಾನಾಥ ಮತ್ತು ವಿಟ್ಲ ಶೌರ್ಯ ವಿಪತ್ತು ನಿರ್ವಹಣಾ ಸದಸ್ಯರಾದ ಸದಸ್ಯರಾದ ಕೆ.ವಸಂತ ಗೌಡ ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು