Tuesday, February 11, 2025
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಫೆ.13ರಿಂದ ಫೆ.17ರವರೆಗೆ ವಿಟ್ಲ ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿಯ ಪಂಚಕಲ್ಯಾಣ ಮಹೋತ್ಸವ-ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಜೈನ ಧರ್ಮದವರು ಪುರಾತನ ಕಾಲದಲ್ಲಿ ನಿರ್ಮಿಸಿದ ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿಯು ಪಂಚಕಲ್ಯಾಣ ಮಹೋತ್ಸವದ ಸಂಭ್ರಮದ ಕ್ಷಣಕ್ಕೆ ಸಜ್ಜಾಗಿದೆ. ವಿಟ್ಲ ಭಗವಾನ್ 1008 ಚಂದ್ರನಾಥ ಸ್ವಾಮಿ ಬಸಿ ವಿಟ್ಲ ಪುತ್ತೂರು ರಸ್ತೆಯ ಹಿಂದಿನ ಜೈನ ಪೇಟೆ ಎಂದೇ ಕರೆಯಲ್ಪಡುವ ಈಗಿನ ಮೇಗಿನಪೇಟೆಯಲ್ಲಿ ವಿಟ್ಲದ ಜನತೆಯ ಗಮನ ಸೆಳೆಯುತ್ತಿದೆ.

ಇದೀಗ ವಿಟ್ಲ ಜೈನ ಬಸದಿಯು ವಿಟ್ಲದ ಹಿರಿಮೆಗೆ ಮತ್ತೊಂದು ಗರಿ ಎಂಬAತೆ ತನ್ನ ಹೊಸ ರೂಪದೊಂದಿಗೆ ವಿಶೇಷ ಆಕರ್ಷಣೆಯಾಗಿ ಕಣ್ಮನ ಸೆಳೆಯುತ್ತಿದೆ. ಮೂಡಬಿದಿರೆಯ ಜೈನ ಮಠಕ್ಕೆ ಒಳಪಟ್ಟ ವಿಟ್ಲ ಬಸದಿಯು 800 ವರ್ಷಗಳ ಇತಿಹಾಸ ಹೊಂದಿದೆ. ಸೆ.5 2022ರಂದು ವಿಟ್ಲ ಜೈನ ಬಸದಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆದಿದ್ದು, ಇದೀಗ ಜೈನ ಧರ್ಮದ 24 ತೀರ್ಥಂಕರರಲ್ಲಿ 8ನೇ ತೀರ್ಥಂಕರರಾದ ಭ|| ಶ್ರೀ ಚಂದ್ರನಾಥ ಸ್ವಾಮಿ ಮತ್ತು 24ನೇ ತೀರ್ಥಂಕರರಾದ ಭ||ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ, ಹಾಗು ಯಕ್ಷಿ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಮತ್ತು ಯಕ್ಷಿ ಶ್ರೀ ಪದ್ಮಾವತಿ ಅಮ್ಮನವರ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ವಿಟ್ಲ ಪಂಚಲಿAಗೇಶ್ವರ ದೇವಸ್ಥಾನಕ್ಕೂ ಈ ವಿಟ್ಲ ಜೈನ ಬಸದಿಗೂ ಅವಿನಾಭವ ಸಂಬAಧವಿದೆ. ವಿಟ್ಲ ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಜೈನ ಬಸದಿಗೆ ವಿಶೇಷ ಗೌರವ ಸ್ಥಾನಮಾನ ನೀಡಲಾಗುತ್ತದೆ. ಅದಲ್ಲದೆ ವಿಟ್ಲ ಪರಿಸರದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕ್ಷೇತ್ರಗಳಿಗೆ ಸಂಬAಧಪಟ್ಟ ಧಾರ್ಮಿಕ ಕಾರ್ಯಗಳ ಹಸಿರು ಹೊರೆಕಾಣಿಕೆ ಮೆರವಣಿಗೆ ಇವೆಲ್ಲವೂ ಜೈನ ಬಸದಿಯಿಂದಲೇ ಹೊರಡುವುದು ಇಲ್ಲಿನ ವಿಶೇಷ. ಇಲ್ಲಿ ದಿನದಲ್ಲಿ ಎರಡು ಹೊತ್ತು ಪೂಜೆ ಪುನಸ್ಕಾರಗಳು ನಡೆಯುತ್ತದೆ. ಈ ಹಿಂದೆ ಈ ಬಸದಿಯಲ್ಲಿ ಅನೇಕ ಮನದಿಚ್ಚೆ, ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ದೊರಕಿದ ಅದೆಷ್ಟೋ ಉದಾಹರಣೆಗಳು ಕೂಡಾ ಇದೆ. ಹೊರ ಭಾಗದಿಂದ ನೋಡುವ ಭಕ್ತಾಧಿಗಳಿಗೆ ಈ ಬಸದಿಯು ನವಿಲಿನಂತೆ ಆಕರ್ಷಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಸದಿಯು ನವಿಲು ಬಸದಿ ಎಂದು ಪ್ರವಾಸಿತಾಣವಾಗುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಿನ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಿ ವಿನಯ ಕುಮಾರ್ ಅವರ ಮುಂದಾಳತ್ವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಬಸದಿಯು ಎಲ್ಲಾ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದು, ಇದೀಗ ಇವರ ಮನೆತನದ ಇಂದಿನ ತಲೆಮಾರುಗಳು ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮ ಮಾಡಲು ಮುಂದಾಗಿದ್ದು, ಯುವಕರಿಗೆ ಮಾದರಿಯಾಗಿದೆ.

ಫೆ.13ರಿಂದ ಫೆ.17ರವರೆಗೆ ಜೈನಬಸದಿಯಲ್ಲಿ ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿ ತೀರ್ಥಂಕರರ ಮತ್ತು ಭಗವಾನ್ ಶ್ರೀ 1008 ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಟೆ ಹಾಗೂ ಯಕ್ಷಿ ಶ್ರೀ ಪದ್ಮಾವತಿ ಅಮ್ಮನವರ ಹಾಗೂ ಯಕ್ಷಿ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸುಮಾರು 30ರಿಂದ 40 ಸಾವಿರ ಭಕ್ತಾಧಿಗಳು ಸೇರುವ ನಿರೀಕ್ಷೆ ಇದೆ.