![](https://www.kahalenews.com/wp-content/uploads/2025/02/vlcsnap-2025-02-11-17h05m16s582-750x450.png)
ಉಡುಪಿ : ಉಡುಪಿ ನಗರದ ಅಂಬಾಗಿಲು – ಪೆರಂಪಳ್ಳಿ ರಸ್ತೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪೆರಂಪಳ್ಳಿ ಸಮೀಪದ ಗುಜರಿ ಅಂಗಡಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹನೀಫ್ ಎಂಬುವರಿಗೆ ಸೇರಿದ ಗುಜರಿ ಅಂಗಡಿ ಇದಾಗಿದೆ.
ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಬಳಿಕ ಆಸುಪಾಸಿಗೂ ವ್ಯಾಪಿಸಿದೆ. ಭಾರೀ ಹೊಗೆಯಿಂದ ಈ ಪ್ರದೇಶ ಆವರಿಸಿಕೊಂಡಿದ್ದು
ಅಕ್ಕ ಪಕ್ಕದ ಮನೆಯವರನ್ನು ಅಗ್ನಿಶಾಮಕ ಸಿಬ್ಬಂದಿ ತೆರವು ಮಾಡಿದರು. ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆದಿದೆ. ಗುಜರಿ ಅಂಗಡಿಯಾದ ಕಾರಣ ಗೋಡೌನ್‌ನಲ್ಲಿ ಬೇಗ ಉರಿಯುವ ಎಣ್ಣೆಯಂತಹ ಸಾಮಗ್ರಿ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಆದರೆ ಭಾರೀ ಪ್ರಮಾಣದ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.