ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ ಮಾಡದಿದ್ದರೆ ಕದನ ವಿರಾಮ ರದ್ದು : ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್-ಕಹಳೆ ನ್ಯೂಸ್
![](https://www.kahalenews.com/wp-content/uploads/2025/02/508370-donald-trump-5-750x450.webp)
ವಾಷಿಂಗ್ಟನ್: ಗಾಜಾದಲ್ಲಿ ಹಮಾಸ್ ಒತ್ತೆಯಿರಿಸಿಕೊಂಡಿರುವ ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಶನಿವಾರದೊಳಗೆ ಬಿಡುಗಡೆಗೊಳಿಸದಿದ್ದರೆ, ಹಮಾಸ್-ಇಸ್ರೇಲ್ ಕದನ ವಿರಾಮವನ್ನು ರದ್ದು ಮಾಡಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ಕದನ ವಿರಾಮ ಉಲ್ಲಂಘಿಸಿದೆ ಎಂದು ಆರೋಪಿಸಿ, ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಹಮಾಸ್ ವಿಳಂಬ ಮಾಡುತ್ತಿರುವುದರಿಂದ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಅಲ್ಲದೆ, “ಒತ್ತೆಯಾಳುಗಳ ಬಿಡುಗಡೆಯಾಗದಿದ್ದಲ್ಲಿ ಕದನ ವಿರಾಮ ರದ್ದುಗೊಳಿಸಲಾಗುತ್ತದೆ. ಇದರಿಂದ ಈ ಪ್ರದೇಶದಲ್ಲಿ ಮತ್ತೊಮ್ಮೆ ನರಕ ಸೃಷ್ಟಿಯಾಗಲಿದೆ. ನನ್ನ ಎಚ್ಚರಿಕೆ ಹಮಾಸ್‌ಗೆ ಅರ್ಥವಾಗಬಹುದು ಎಂದುಕೊಂಡಿದ್ದೇನೆ. ಈ ಕುರಿತ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾದದ್ದು ಇಸ್ರೇಲ್‌ಗೆ ಬಿಟ್ಟದ್ದು ಎಂದೂ ಟ್ರಂಪ್ ಹೇಳಿದ್ದಾರೆ.