Wednesday, February 12, 2025
ಜಿಲ್ಲೆದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಮೂಡುಬಿದಿರೆ:ಮೀನು, ಮಾಂಸ ಅಂಗಡಿಗಳ ಕೊಳಚೆಗೆ ಇಲ್ಲ ದಾರಿ-ಕಹಳೆ ನ್ಯೂಸ್

ಮೂಡುಬಿದಿರೆ: ಕಳೆದ 7 ವರ್ಷಗಳಿಂದ ಸ್ವರಾಜ್ಯಮೈದಾನದಲ್ಲಿ ತಾತ್ಕಾಲಿಕವಾಗಿ ನೆಲೆಗೊಂಡ ಪುರಸಭೆಯ ದಿನವಹಿ ಮಾರುಕಟ್ಟೆಯ ಒಂದು ಭಾಗವಾಗಿ ಪೂರ್ವ ಭಾಗದಲ್ಲಿ ಮೀನು ಮತ್ತು ಮಾಂಸ ಮಾರಾಟ ಮಳಿಗೆಗಳಿವೆ.

ಈ ಅಂಗಡಿಗಳಿಂದ ದೊಡ್ಡ ಪ್ರಮಾಣದ ಮೀನು ಮತ್ತು ಮಾಂಸ ತ್ಯಾಜ್ಯ ಮತ್ತು ಕೊಳಚೆ ನೀರು ಹೊರಗೆ ಬರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಹೊರಹರಿವಿಗೆ ಸರಿಯಾದ ಚರಂಡಿ ಮತ್ತು ಇತರ ವ್ಯವಸ್ಥೆಗಳು ಇಲ್ಲದೆ ತೆರೆದ ಜಾಗದಲ್ಲೇ ಹರಿಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೀನು ಮಾಂಸ ಕೊಳಚೆಯ ಮುಕ್ತ ಹರಿವಿನಿಂದಾಗಿ ಹತ್ತಿರದ ಅಂಗಡಿಯವರಿಗೆ, ಆಳ್ವಾಸ್‌ ಕೂಡುರಸ್ತೆಯವರೆಗೆ, ಅಲ್ಲಿಂದ ಆಸ್ಪತ್ರೆಯತ್ತ ಸಾಗುವ ರಸ್ತೆಯ ಪಕ್ಕದ ಅಂಗಡಿಯವರಿಗೆ ಹಿಂದಿನಿಂದಲೂ ಭಾರಿ ಸಮಸ್ಯೆ ಆಗುತ್ತಿದೆ. ಪುರಸಭೆಯ ಮೇಲೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಕೊನೆಗೆ ಈ ಕೊಳಚೆ ನೀರಿನ ಹರಿವಿಗೆ ಗುಪ್ತಗಾಮಿನಿ ಚರಂಡಿಯ ಹಾದಿ ತೋರಿ ಕೈತೊಳೆಯಲಾಗಿತ್ತು.

ಆದರೆ ಇದೀಗ, ಮಾಂಸದಂಗಡಿಗಳ ಬದಿಯಿಂದಲೇ ಹೊರಡುವ ಕೊಳಚೆ ನೀರು ಅದೇ ಪಾರ್ಶ್ವದಲ್ಲಿ ಮುಂದೆ ಸಾಗುವಾಗ ಸರಿಯಾದ ಚರಂಡಿ ಇಲ್ಲದೆ, ಬಾಯಿ ತೆರೆದ ಸ್ಥಿತಿಯಲ್ಲಿ ಹರಿಯುತ್ತಲಿದೆ. ಈ ತೆರೆದ ಚರಂಡಿಯಲ್ಲೂ ಕಲ್ಲು, ಕಸ ರಾಶಿ ಬಿದ್ದಿದ್ದು ಕೊಳಚೆ ನಿಂತು ಗಬ್ಬು ನಾತ ಬೀರುತ್ತಲಿದೆ. ಹತ್ತಿರದ ಅಂಗಡಿಯವರಾಗಲೀ ಈ ಇಲ್ಲಿನ ಎರಡು ಕೂಡುರಸ್ತೆಗಳ ಮೂಲಕ ಸಾಗುವ ಜನರಾಗಲೀ ಈ ಅಸಹ್ಯ ವಾಸನೆಗೆ ಬೇಸತ್ತು ಹೋಗಿದ್ದಾರೆ. ಈ ನಡುವೆ ಈಗ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್‌ ಉತ್ತರ ಹಿಂಭಾಗಕ್ಕೇ ತಾಗಿಕೊಂಡೇ ಈ ತೆರೆದ ಚರಂಡಿ ಇದೆ ಎಂಬುದನ್ನು ಗಮನಿಸ ಬೇಕಾಗಿದೆ. ತುರ್ತಾಗಿ ಈ ಕೊಳಚೆ ನೀರಿನ ಹರಿವಿಗೆ ಸೂಕ್ತ ಕ್ರಮ ಜರಗಿಸಬೇಕಾಗಿದೆ.

ಜಾಲರಿ ಅಳವಡಿಕೆಗೆ ಕ್ರಮ
ಮೀನು, ಮಾಂಸ ಮಾರಾಟ ಮಳಿಗೆಗಳಿಂದ ಹೊರಬರುವ ತ್ಯಾಜ್ಯ ನೀರನ್ನು ಮುಚ್ಚಿದ ಹೊಂಡದಿಂದ ನಿಯಮಿತವಾಗಿ ಸೆಳೆದು ಹೊರ ಸಾಗಿಸಲಾ ಗುತ್ತಿದೆ. ಈ ತ್ಯಾಜ್ಯ ನೀರಿನ ಜತೆಗೆ ಇತರ ವಸ್ತುಗಳೂ ಹರಿದು ಬರುತ್ತಾ ಇರುವುದನ್ನು ಗಮನಿಸಿ ಒಮ್ಮೆ ಪೂರ್ಣವಾಗಿ ಹೊಂಡವನ್ನು ಖಾಲಿ ಮಾಡಿ ಶುಚಿಗೊಳಿಸಿ ಬಳಿಕ ಮೇಲ್ಗಡೆ ಜಾಲರಿಯನ್ನು ಅಳವಡಿಸಿ ಶೋಧಿಸಲ್ಪಟ್ಟ ಕೊಳಚೆ ನೀರು ಮಾತ್ರಾ ಹೊಂಡದಲ್ಲಿ ಸಂಗ್ರಹವಾಗುವಂತೆ ಮಾಡಲಾಗುವುದು