![](https://www.kahalenews.com/wp-content/uploads/2025/02/download-1-2.jpg)
ಉಡುಪಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಕರ್ನಾಟಕದಿಂದಲೂ ಲಕ್ಷಾಂತರ ಭಕ್ತರು ತೆರಳುತ್ತಿದ್ದಾರೆ. ಕರಾವಳಿ ಜಿಲ್ಲೆಗಳ ಯಾತ್ರಾರ್ಥಿಗಳು ಕುಂಭಮೇಳಕ್ಕೆ ತೆರಳುವ ಅನುಕೂಲ ಆಗುವಂತೆ ವಿಶೇಷ ರೈಲು ಸೇವೆಯ ವ್ಯವಸ್ಥೆ ಮಾಡಲಾಗಿದೆ.
ಫೆ.17ರ ಮಧ್ಯಾಹ್ನ 12.30ಕ್ಕೆ ಉಡುಪಿಯಿಂದ ಈ ರೈಲು ಹೊರಟು ಫೆ.19ರ ಬೆಳಗ್ಗೆ 6.30ಕ್ಕೆ ಪ್ರಯಾಗ್‌ರಾಜ್ ತಲುಪಲಿದೆ. ಫೆ.20ರ ಸಂಜೆ 6.30ಕ್ಕೆ ಪ್ರಯಾಗ್‌ರಾಜ್ ನಿಂದ ಹೊರಟು ಫೆ.22ರ ಸಂಜೆ ವೇಳೆಗೆ ಉಡುಪಿ ತಲುಪಲಿದೆ. ಈ ಸಂಬಂಧ ಕೊಂಕಣ್ ರೈಲ್ವೇಯಿಂದ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಇದು ಕುಂಭ ಮೇಳ ವಿಶೇಷ ರೈಲು (01192/01191). ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇತ್ತೀಚೆಗೆ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಕರಾವಳಿ ಭಾಗದ ಯಾತ್ರಾರ್ಥಿಗಳಿಗೆ ಅನುಕೂಲ ಆಗುವಂತೆ ಉಡುಪಿಯಿಂದ ಪ್ರಯಾಗ್‌ರಾಜ್‌ಗೆ ವಿಶೇಷ ರೈಲು ವ್ಯವಸ್ಥೆ ಮಾಡುವಂತೆ ಕೋರಿದ್ದರು.
ಅದರಂತೆ ಈಗ ಅಧಿಸೂಚನೆ ಹೊರಡಿಸಲಾಗಿದೆ. ಫೆ.14ರ ಮಧ್ಯಾಹ್ನ ಅನಂತರ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.