Saturday, February 15, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಭವಿಷ್ ಘಟಕದ ಪ್ರೇರಣಾ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭ-ಕಹಳೆ ನ್ಯೂಸ್

ಪುಣಚ :ಫೆ 14 ರಂದು ಶ್ರೀ ಮಹಿಷಮರ್ದಿನಿ ದೇವಸ್ಥಾನ ಪುಣಚ ಇಲ್ಲಿ ಭವಿಷ್ ಘಟಕದ ಪ್ರೇರಣಾ ವಾರ್ಷಿಕ ಶಿಬಿರವು ನಡೆಯಿತು. ಗಣ್ಯರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ದೀಪ ಪ್ರಜ್ವಲನಗೈಯುವ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು.
ಭವಿಷ್ ಘಟಕಗಳ ನಿರ್ವಾಹಕ ಸಂಯೋಜಕರು, ಕರ್ನಾಟಕ ಪ್ರಾಂತ ದ ಶ್ರೀ ಗಣಪತಿ ಹೆಗ್ಡೆ ಇವರು ಸಮಾಜದಲ್ಲಿ ಶಿಕ್ಷಕನ ಪಾತ್ರ, ಶಿಕ್ಷಕನು ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ
ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಅಧ್ಯಕ್ಷರಾದ ಶ್ರೀ ನಾರಾಯಣ ಸೋಮಯಾಜಿ ಮತ್ತು ಶ್ರೀ ಎಸ್. ಆರ್ ರಂಗಮೂರ್ತಿ ಮಾಜಿ
ಅಧ್ಯಕ್ಷರು, ಕ್ಯಾಂಪ್ಕೋ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವರು ಶುಭ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಭವಿಷ್ ಘಟಕದ ಸಂಯೋಜಕರಾದ ಸಹನಾ ಮಾತಾಜಿ,
ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಗೂ ವಿವೇಕಾನಂದ ಕಾಲೇಜಿನ ಸಂಯೋಜಕರು ಮತ್ತು ಉಪನ್ಯಾಸಕರು ಮತ್ತು
ವಿದ್ಯಾರ್ಥಿಗಳು ಪಾಲ್ಗೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿನಿಯಾದ ಪದ್ಮಶ್ರೀ ಪ್ರಾರ್ಥಿಸಿ ಭವಿಷ್ ಘಟಕದ ಸಂಯೋಜಕರಾದ ಜಯಲಕ್ಷ್ಮಿ ಮಾತಾಜಿ ಸ್ವಾಗತಿಸಿ, ರಶ್ಮಿತಾ ಮಾತಾಜಿ ವಂದಿಸಿ, ಸಂಧ್ಯಾ ಮಾತಾಜಿ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು