Saturday, February 15, 2025
ಉತ್ತರ ಪ್ರದೇಶಸಂತಾಪಸುದ್ದಿ

ಮದುವೆಯಾದ 12 ಗಂಟೆಯಲ್ಲೇ ಅಪಘಾತದಲ್ಲಿ ಮೃತಪಟ್ಟ ವರ, ಮುಗಿಲು ಮುಟ್ಟಿದ ಆಕ್ರಂದನ-ಕಹಳೆ ನ್ಯೂಸ್

ಉತ್ತರಪ್ರದೇಶ: ಮದುವೆ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಮೌನ ಆವರಿಸಿದೆ, ಆಗತಾನೆ ಮದುವೆಯಾದ ಯುವಕ ಚಿರ ನಿದ್ರೆಗೆ ಜಾರಿದ್ದಾನೆ, ಹೌದು ಇದು ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆ

ಉತ್ತರ ಪ್ರದೇಶದ ಬರೇಲಿಯ ಸತೀಶ್ ಎಂಬ ಯುವಕ ಸ್ವಾತಿ ಎಂಬ ಯುವತಿಯ ಜೊತೆ ಬುಧವಾರ ವಿವಾಹವಾಗಿದ್ದ ಇದೇ ಖುಷಿಯಲ್ಲಿ ಮನೆಯಲ್ಲಿದ್ದ ಸಂಬಂಧಿಕರಿಗೆ ಏನಾದರೂ ಸ್ವೀಟ್ ತರೋಣ ಎಂದು ತನ್ನ ಮೂವರು ಸ್ನೇಹಿತರ ಜೊತೆ ಸೇರಿ ಸತೀಶ್ ಕಾರಿನಲ್ಲಿ ಪಟ್ಟಣದ ಕಡೆಗೆ ಹೊರಟಿದ್ದಾರೆ ಈ ವೇಳೆ ರಸ್ತೆ ಬದಿ ನಿಂತಿದ್ದ ಟ್ರಕ್ ಗೆ ಸತೀಶ್ ಚಲಾಯಿಸುತ್ತಿದ್ದ ಕಾರು ವೇಗವಾಗಿ ಡಿಕ್ಕಿ ಹೊಡೆದಿದೆ ಪರಿಣಾಮ ಸತೀಶ್ ಸ್ಥಳದಲ್ಲೇ ಮೃತಪಟ್ಟರೆ ಉಳಿದ ಮೂವರು ಸ್ನೇಹಿತರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತ ಸತೀಶ್ ಮೃತಪಟ್ಟ ವಿಚಾರ ಮನೆಯಲ್ಲಿ ತಿಳಿಯುತ್ತಿದ್ದಂತೆ ಸಂಭ್ರಮದಲ್ಲಿದ್ದ ಮನೆ ಶೋಕಸಾಗರವಾಗಿದೆ ಒಂದೆಡೆ ಮದುವೆಯಾದ ಒಂದೇ ದಿನಕ್ಕೆ ಗಂಡನನ್ನು ಕಳೆದುಕೊಂಡ ಪತ್ನಿ, ಇನ್ನೊಂದೆಡೆ ಪುತ್ರನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿದ್ದು, ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯರ ಹೇಳಿಕೆಯಂತೆ ಕಾರು ಚಾಲಕನ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ.