
ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಮಕ್ಕಳ ಕಲಾ ಲೋಕದ 2025-26ನೇ ಸಾಲಿನ ಅಧ್ಯಕ್ಷರಾಗಿ ಬರಹಗಾರ ರಮೇಶ ಎಂ. ಬಾಯಾರು ಪುನರಾಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯ ಎಂ.ಕೆ ನಾಯ್ಕ್ ಅಡ್ಯನಡ್ಕ, ಕಾರ್ಯದರ್ಶಿಯಾಗಿ ಪುಷ್ಪಾ ಎಚ್ ವಿಟ್ಲ, ಕೋಶಾಧಿಕಾರಿಯಾಗಿ ನಾಟೆಕಲ್ಲು ಶಾಲಾ ಮುಖ್ಯ ಶಿಕ್ಷಕ ಶ್ರೀಪತಿ ನಾಯಕ್, ಜೊತೆ ಕಾರ್ಯದರ್ಶಿಯಾಗಿ ಓಜಾಲ ಶಾಲಾ ಶಿಕ್ಷಕಿ ವಿಲ್ಮಾ ಸಿಕ್ವೇರ ಅವರನ್ನೇ ಪುನರಾಯ್ಕೆ ಮಾಡಲಾಗಿದೆ. ನಿಕಟಪೂರ್ವ ಅಧ್ಯಕ್ಷರುಗಳನ್ನು ಗೌರವ ಸಲಹೆಗಾರರೆಂದು ಸಮಿತಿಗೆ ಸೇರಿಸಲಾಗಿದೆ.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಿವರಾಮ ಭಟ್ ನೆಡ್ಲೆ, ಜಯರಾಮ ಡಿ ಪಡ್ರೆ, ವಿಶ್ವನಾಥ ಗೌಡ ಕುಳಾಲು, ಸಂಜೀವ ಮಿತ್ತಳಿಕೆ, ಭವಾನಿ ಮಾಣಿ, ಅನ್ನ ಪೂರ್ಣ, ಲೀಲಾವತಿ ಬಿ, ವಸಂತ ನಾಯಕ್ ಆಜೇರು, ಇಸ್ಮಾಯಿಲ್ ಕೆ, ರಾಜೇಶ್ ವಿಟ್ಲ, ಜಯಶ್ರೀ , ನಿರಂಜನ ಕೇಶವ ನಾಯ್ಕ್, , ಸಂಜೀವ ಎನ್ ಮಿತ್ತೂರು, ವಿಶ್ವನಾಥ ಕುಲಾಲ್ ಮಿತ್ತೂರು, ಮಾಧ್ಯಮ ಪ್ರಮುಖರಾಗಿ ಚಿನ್ನಾ ಕಲ್ಲಡ್ಕ ರವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರ ಭಾಸ್ಕರ ಅಡ್ವಳ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಸಿ ಸಹಕದರು.