Recent Posts

Sunday, January 19, 2025
ಸುದ್ದಿ

Breaking News : ಜನಾರ್ದನ ರೆಡ್ಡಿಗೆ ಷರತ್ತು ಬದ್ಧ ಜಾಮೀನು ಮಂಜೂರು – ಕಹಳೆ ನ್ಯೂಸ್

ಬೆಂಗಳೂರು (ನ.14): ಅಂಬಿಡೆಂಟ್​ ಲಂಚ ಪ್ರಕರಣ ಸಂಬಂಧ ಸಿಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಷರತ್ತು ಬದ್ಧ ಜಾಮೀನು ನೀಡಿ ನ್ಯಾಯಾಲಯ ಆದೇಶ ನೀಡಿದೆ.

ಜಾಮೀನು ಅರ್ಜಿ ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಲಯ, ತೀರ್ಪು ಪ್ರಕಟಿಸಿದೆ.  ಇಬ್ಬರ ಶ್ಯೂರಿಟಿ, ಒಂದು ಲಕ್ಷ ಬಾಂಡ್​ ಮೇಲೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ರೆಡ್ಡಿ ಸಂಬಂಧಿ ರಘುರಾಮ್​ ರೆಡ್ಡಿ ಶ್ಯೂರಿಟಿ ನೀಡಿದ್ದು, ರೆಡ್ಡಿ ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಮೀನು ಅರ್ಜಿ ವಿಚಾರಣೆ ವೇಳೆ ತನಿಖಾಧಿಕಾರಿ ಎಸಿಪಿ ವೆಂಕಟೇಶ ಪ್ರಸನ್ನ, ಎಸಿಪಿ ಸುಬ್ರಮಣಿ, ಎಸಿಪಿ ಮಂಜುನಾಥ ಚೌಧರಿ ನ್ಯಾಯಾಲಯದಲ್ಲಿ ಹಾಜರಿದ್ದರು. ರೆಡ್ಡಿ ಆಪ್ತ ಅಲಿಖಾನ್, ಹಾಗೂ ರೆಡ್ಡಿ ಪರ ವಕೀಲರು ಕೋರ್ಟ್​ಗೆ ಹಾಜರಾಗಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು