Wednesday, March 26, 2025
ಅಂಕಣದಕ್ಷಿಣ ಕನ್ನಡಮಂಗಳೂರುಮುಂಬೈಸಿನಿಮಾಸುದ್ದಿ

ಕಣ್ಣಲ್ಲೇ ಮೋಡಿ ಮಾಡೋ ‘ತುಳುನಾಡ ಕ್ರಶ್’ ಸಮತಾ ಅಮೀನ್ – ಕಹಳೆ ನ್ಯೂಸ್

ಕಣ್ಣಲ್ಲೇ ಮೋಡಿ ಮಾಡೋ ಅಂದದ ಚೆಲುವೆ, ಹುಟ್ಟಿದ್ದು ಮುಂಬೈನಲ್ಲಾದರೂ ತುಳುನಾಡಿನ ಸಂಸ್ಕೃತಿ ಮೈಗೂಡಿಸಿಕೊಂಡಿರುವಾಕೆ. ದಿಲ್ ರಂಗ್ ಅನ್ನೋ ಆಲ್ಬಮ್ ಸಾಂಗ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ತುಳುನಾಡು ಕ್ರಶ್ ಅಂತ ಖ್ಯಾತಿ ಪಡೆದ ತುಳುನಾಡ ಬೆಡಗಿ ಸಮತಾ ಅಮೀನ್.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಮತಾ ದಿ. ಅಶೋಕ್ ಅಮೀನ್ ಹಾಗೂ ಮಂಜುಳಾ ಅಮೀನ್ ದಂಪತಿಯ ಪ್ರೀತಿಯ ಮಗಳು. ಇವರು ಎಸ್ ಆರ್ ಪಿ ಸತ್ಯ ಸಾಯಿ ನಿಕೇತನ್ ಹೈಸ್ಕೂಲ್ ಹಾಗೂ ಸೈಂಥ್ ಥೋಮಸ್ ಹೈಸ್ಕೂಲ್‌ನಲ್ಲಿ ಪ್ರಾಥಾಮಿಕ ಶಿಕ್ಷಣ ಪಡೆದು ಸಿಸ್ಟರ್ ನಿವೇದಿತಾ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಹೈಸ್ಕೂಲ್, ಮಾಡೆಲ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದ್ದಾರೆ. ಬಳಿಕ ಪದವಿ ಶಿಕ್ಷಣ ಹಾಗೂ ಸಾಫ್ಟ್ವೇರ್‌ನಲ್ಲಿ ಡಿಪ್ಲೋಮಾ ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಇವರು ಡ್ಯಾನ್ಸ್ ಟೀಚರ್ ಕೂಡಾ ಆಗಿದ್ದವರು. ತಮಿಳು, ತೆಲುಗು ಬಾಷೆಯ ಸಿನಿಮಾದಲ್ಲಿ ಡ್ಯಾನ್ಸರ್ ಆಗಿ ಗುರುತಿಸಿಕೊಂಡವರು ಸಮತಾ. ಸಾಹೋ, ಮಾರಿ2 ಹಾಗೂ ಸ್ಯಾಮಿ2 ಚಿತ್ರಗಳಲ್ಲಿ ಹಿನ್ನೆಲೆ ನರ್ತಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಬಳಿಕ ಅಭಿಷೇಕ್ ರಾವ್ ಅವರ ಕಥೆ, ಚಿತ್ರಕಥೆ, ನಿರ್ದೇಶನದಲ್ಲಿ ಮೂಡಿಬಂದ ದಿಲ್ ರಂಗ್ ಅನ್ನೋ ಆಲ್ಬಮ್ ಸಾಂಗ್ ನಲ್ಲಿ ಸುಖೇಶ್ ಎಸ್ ಕೆ ಅವರು ಕೊಟ್ಟ ಅವಕಾಸದಿಂದ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗೆ ಸಣ್ಣಪುಟ್ಟ ಅವಕಾಶಗಳನ್ನು ಬಳಸಿಕೊಂಡು ಹೆಸರು ಗಳಿಸಿದ್ದ ಸಮತಾ ಯೋಧ ಮೋಶನ್ ಪಿಕ್ಚರ್ಸ್ ಪ್ರೊಡಕ್ಷನ್ ನ ಗೋಸ್ಮರಿ ಫ್ಯಾಮಿಲಿ ಅನ್ನೋ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಬಳಿಕ ಹರಿಪ್ರಸಾದ್ ರಾಯ್ ಪ್ರೊಡಕ್ಷನ್ ಟೀಂನ ಪುಳಿಮುಂಚಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಅಲ್ಲೂ ಸೈ ಎನಿಸಿಕೊಂಡಿದ್ದಾರೆ.

ಸದ್ಯ ರಾಜ್ ಸೌಂಡ್ಸ್ ಆಂಡ್ ಟೀಂನ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನಿಮಾದಲ್ಲಿ ನಟಿಸಿ ತನ್ನ ಅಭಿನಯದ ಮೂಲಕ ಮೋಡಿ ಮಾಡಿದ್ದಾರೆ. ಅಷ್ಟೇ ಅಲ್ಲ ಗಜಾನನ ಕ್ರಿಕೆಟರ್ಸ್ ಅನ್ನೋ ಸಿನಿಮಾ ದಲ್ಲಿ ಅಭಿನಯಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿದೆ. ಅದೇನೆ ಆಗ್ಲಿ ತುಳುನಾಡಿಗೆ ಅದ್ಭುತ ನಟನೆಯ ನಟಿ ಸಿಕ್ಕಿದ್ದು ಅವರಿಗೆ ಇನ್ನಷ್ಟು ಸಿನಿಮಾಗಳಲ್ಲಿ ಅವಕಾಶ ಸಿಕ್ಕು ದೇಶ ವಿದೇಶಗಳಲ್ಲೂ ತಮ್ಮ ಹೆಸರನ್ನು ಅಚ್ಚೊತ್ತಲಿ ಅನ್ನೋದು ನಮ್ಮ ಆಶಯ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ